ಮಂಗಳೂರು : ಸತ್ಯ ಪ್ರಮಾಣ ಮಾಡಲಿ ಎಂದು ಪ್ರಕಾಶ್‌ ಸಾಲ್ಯಾನ್ ಆಗ್ರಹಿಸಿದ್ದಾರೆ. ಯಶವಂತ ಪ್ರಭು ಅವರ ಮೇಲೆ ಹಲ್ಲೆ ಪ್ರಕರಣ ನಡೆದ ವೇಳೆ ಆ ಜಾಗದಲ್ಲಿ ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿರುವ ಮಣಿ ಎಂಬುವವರು ಇರಲೇ ಇಲ್ಲ.

ಹಾಗಾಗಿ ಶಾಸಕರು ಹಾಗೂ ಮಣಿಯವರು ಮಾ.4ರಂದು ಪೂರ್ವಾಹ್ನ 11 ಗಂಟೆಗೆ ಕದ್ರಿ ಮುಂಜನಾಥ ದೇವಸ್ಥಾನಕ್ಕೆ ಹಾಜರಾಗಿ ಈ ಬಗ್ಗೆ ಸತ್ಯ ಪ್ರಮಾಣ ಮಾಡಬೇಕು ಎಂದು ಕಾಂಗ್ರೆಸ್‌ ಮುಖಂಡ ಪ್ರಕಾಶ್‌ ಸಾಲ್ಯಾನ್ ಆಗ್ರಹಿಸಿದರು.