ಮಂಗಳೂರು : ಪ್ರಹ್ಲಾದ ಜೋಷಿ ತಮ್ಮ ಬೇಜವಾಬ್ದಾರಿ ಹೇಳಿಕೆ ಹಿಂಪಡೆಯಬೇಕು. ರಾಜ್ಯದಲ್ಲಿರುವ ಎಲ್ಲ ಸಮುದಾಯಗಳೂ ಹಿಂದುಳಿದವರೇ ಆಗಿದ್ದು, 12 ಲಕ್ಷಕ್ಕಿಂತ ಹೆಚ್ಚು ಆದಾಯ ಇರೋರಿಗೆ ಮೀಸಲಾತಿ ಬರೋದಿಲ್ಲ.
ಹಿಂದುಳಿದ ವರ್ಗಗಳ ಬಗ್ಗೆ ಯಾವ ರೀತಿ ಸಮೀಕ್ಷೆ ಮಾಡಬೇಕೆಂದು ಕಾನೂನು ಇದೆ. ಇದಲ್ಲದೆ, ಹತ್ತು ವರ್ಷಗಳಿಗೊಮ್ಮೆ ದೇಶದಲ್ಲಿ ಜನರ ಸ್ಥಿತಿಗತಿ ತಿಳಿಯಲು ಗಣತಿ ಮಾಡಬೇಕು. ಆದರೆ ಕಳೆದ 20 ವರ್ಷಗಳಲ್ಲಿ ಗಣತಿ ಆಗಿಲ್ವ ಈಗ ಕಾಂಗ್ರೆಸ್ ಹೇಳಿದ ಬಳಿಕ ಕೇಂದ್ರವೂ ಜಾತಿ ಗಣತಿ ಮಾಡುವುದಕ್ಕೆ ಮುಂದಾಗಿದೆ ಎಂದರು.
ಸಮೀಕ್ಷೆ ಸಂದರ್ಭದಲ್ಲ ಸಣ್ಣ ಪುಟ್ಟ ತಪ್ಪು ಸಹಜ. ಲೋಪ ದೋಷ ಇದ್ದರೆ ಸರಿಪಡಿಸಿಕೊಳ್ಳಬೇಕು. ಆಯೋಗ ಅಥವಾ ಸರ್ಕಾರಗಳು ಸಂವಿಧಾನಕ್ಕಿಂತ ಮಿಗಿಲಿಲ್ಲ ಎಂದು ವಿ.ಆರ್ ಸುದರ್ಶನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

