ಮಂಗಳೂರು: ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಮಂಗಳೂರಿನ ಬಜಪೆ ಇನ್ಸ್ಪೆಕ್ಟರ್ ಬಾಲಕೃಷ್ಣ ಬಿದ್ದಿದ್ದಾರೆ. 5000 ಲಂಚದ ಹಣ ಪಡೆಯಬೇಕಾದರೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಇನ್ಸ್ಪೆಕ್ಟರ್ ಬಿದ್ದಿದ್ದಾರೆ. ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಇನ್ಸ್ಪೆಕ್ಟರ್ ಸಿಕ್ಕಿ ಬಿದ್ದಿದ್ದಾರೆ.
ಚೀಟಿಂಗ್ ಪ್ರಕರಣವೊಂದರಲ್ಲಿ ಆರೋಪಿಗಳಿಂದ ವಶಪಡಿಸಿಕೊಳ್ಳಕಲಾಗಿದ್ದ ಹಣವನ್ನು ಬಿಡುಗಡೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 25,000 ಲಂಚದ ಹಣಕ್ಕೆ ಬಾಲಕೃಷ್ಣ ಬೇಡಿಕೆ ಇಟ್ಟಿದ್ದಾರೆ. 5000 ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಇನ್ಸ್ಪೆಕ್ಟರ್ ಬಾಲಕೃಷ್ಣ ಬಿದ್ದಿದ್ದಾರೆ.

