ಮಂಗಳೂರು : ಲಕ್ಕಿ ಸ್ತ್ರೀಂಗಳ ಹೆಸರಿನಲ್ಲಿ ಜನರಿಗೆ ವಂಚನೆ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ನಿಗಾ ಇರಿಸಿದೆ. ಸ್ತ್ರೀಂಗಳನ್ನು ನಡೆಸುವವರ ಪರಿಶೀಲನೆ ನಡೆಸಲಾಗಿದೆ.

ಸಾರ್ವಜನಿಕರಿಂದ ಮೋಸದ ಬಗ್ಗೆ ದೂರು ಬಂದಾಗ ಕ್ರಮ ವಹಿಸಲಾಗುತ್ತದೆ. ಪರಿಶೀಲನೆಯ ಸಂದರ್ಭದಲ್ಲಿಯೂ ಜನರಿಗೆ ಸಮಸ್ಯೆಯಾಗುತ್ತಿದೆ ಎಂದು ಕಂಡು ಬಂದಾಗ ಅಂತಹವರ ಮೇಲೆ ಕ್ರಮ ಆಗಲಿದೆ.

ಕೆಲವೊಂದು ಸಂಸ್ಥೆಗಳು ನೋಂದಣಿ ಆಗದೆ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.