ಮಂಗಳೂರು: ಮರಣ ಗುಂಡಿ ವಿರುದ್ದ ಮಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆಯನ್ನು ನಗರದ ಮಿನಿವಿಧಾನ ಸೌಧದ ಮುಂಭಾಗದಲ್ಲಿ ನಡೆಸಲಾಯಿತು. ಮಂಗಳೂರಿನ ನಾಗರಿಕರಿಂದ ಹೆದ್ದಾರಿ, ನಗರದ ಗುಂಡಿ ವಿರುದ್ದ ಪ್ರತಿಭಟನೆ ನಡೆಸಿ, ಇತ್ತೀಚಿಗೆ ಹಾಕಲಾದ ಕಳಪೆ ಹೆದ್ದಾರಿ ತೇಪೆ ವಿರುದ್ದ ಆಕ್ರೋಶ ವ್ಯಕ್ತಪಡಿಸಲಾಯಿತು.
ಇಲ್ಲಿ ನಾವು ನೀಡಿದ ತೆರಿಗೆ ಎಲ್ಲಿಗೆ ಹೋಗುತ್ತೆ. ಮನೆ ತೆರಿಗೆ, ರಸ್ತೆ ತೆರಿಗೆ ಹೀಗೆ ಹತ್ತು ಹಲವು ತೆರಿಗೆ ನೀಡ್ತೇವೆ ಆದ್ರೆ ಇಲ್ಲಿನ ರಸ್ತೆ ಬಾವಿಯಂತೆ ಇದೆ. ಯಾರು ಈ ಬಗ್ಗೆ ಪ್ರಶ್ನೆ ಮಾಡಲ್ಲ ಎಂದರು.

ಕೇವಲ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡ್ತೇವೆ ಅದ್ರಬದಲು ಬನ್ನಿ ಜನಪ್ರತಿನಿಧಿಗಳನ್ನು ಪ್ರಶ್ನಿಸೋಣ. ವಿದ್ಯಾರ್ಥಿಗಳು,ಯುವಕರು ರಸ್ತೆ ಬಗ್ಗೆ ಪ್ರಶ್ನೆ ಮಾಡಬೇಕಿದೆ. ಈ ವೇಳೆ ಕಾರ್ತಿಕ್ ಸುವರ್ಣ, ವಿಜಿತ್, ಡೆನಿನ್, ರೇಚಲ್, ರಾಧಿಕಾ, ಪೂಜಾ ಮತ್ತಿತರರು ಉಪಸ್ಥಿತರಿದ್ದರು.

