ಮಂಗಳೂರು : ಹಿಂದು ಜಾಗರಣ ವೇದಿಕೆ ಶಕ್ತಿನಗರ ಇದರ ಲೋಕಕಲ್ಯಾಣಾರ್ಥವಾಗಿ ಮೂರನೇ ವರ್ಷದ ಶ್ರೀ ಪೊಳಲಿ ಅಮ್ಮಾನಡೆಗೆ ನಮ್ಮ ನಡೆ ಪಾದಯಾತ್ರೆಯು ಆದಿತ್ಯವಾರ ಮುಂಜಾನೆ 05:00 ಗಂಟೆಗೆ ನಡೆಯಿತು.

ಶಕ್ತಿನಗರ ವೈದ್ಯನಾಥ ದೈವಸ್ಥಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆಯರು ಪುರುಷರು ಸೇರಿದ್ದು ವೈದ್ಯನಾಥ ದೈವ್ಯಕ್ಕೆ ವಿಶೇಷ ಪೂಜೆ ಬಳಿಕ ಪಾದಯಾತ್ರೆಗೆ ಚಾಲನೆ ನೀಡಲಾಯಿತ್ತು. ವಿಶ್ವ ಹಿಂದೂ ಪರಿಷತ್ ಮುಖಂಡ ಪುರುಷೋತ್ತಮ್ ಜೋಗಿ ಪಾದಯಾತ್ರೆಯ ಮಾಹಿತಿಯನ್ನ ನೀಡಿದರು. ಬಳಿಕ ನೆರೆದ ಸಂಘಟಕರು ತೆಂಗಿನ ಕಾಯಿ ಹೊಡೆಯುವ ಮೂಲಕ ಚಾಲನೆ ನೀಡಲಾಯಿತು.