ಮಂಗಳೂರು: ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ ಕಾರ್ಯಕ್ರಮವು ಮಾರ್ಚ್ 9ರಂದು ಕದ್ರಿಯಿಂದ ಕುತ್ತಾರ್ ಕೊರಗಜ್ಜ ಕ್ಷೇತ್ರಕ್ಕೆ ವಿಶ್ವ ಹಿಂದೂ ಪರಿಷತ್ ಮಂಗಳೂರು ವತಿಯಿಂದ ನಡೆಯಲಿದೆ. ಗೋಹತ್ಯೆ, ಧಾರ್ಮಿಕ ನಿಂದನೆ, ಮಹಿಳಾ ರಕ್ಷಣಾ ಮುಂದಿಟ್ಟು ಪ್ರಾರ್ಥನೆ ಸಲ್ಲಿಸಲಿದ್ದಾರೆ.

ಕುತ್ತಾರಿನಲ್ಲಿ ಧಾರ್ಮಿಕ ಕಾರ್ಯಕ್ರಮ ಮುಂಜಾನೆ 9 ಗಂಟೆಗೆ ನಡೆಯಲಿದೆ. ಪ್ರಮುಖ ಭಾಷಣಕಾರರಾಗಿ ಚಕ್ರವರ್ತಿ ಸೂಲಿಬೆಲೆ ಆಗಮಿಸಲಿದ್ದಾರೆ. ಮಂಗಳೂರಿನಲ್ಲಿ ವಿಎಚ್ಪಿ ಮುಖಂಡ ಶಿವಾನಂದ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.