ಮಂಗಳೂರು : ಮಂಗಳೂರಿನ ಪಡೀಲ್ನಲ್ಲಿರುವ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆ ಸ್ಪತ್ರೆಯಲ್ಲಿ ʼನಮ್ಮ ಕಿಡ್ನಿ ಆರೋಗ್ಯ, ನಮ್ಮ ಕೈಯಲ್ಲಿʼ ವಿಶೇಷ ಕಿಡ್ನಿ ಅರೋಗ್ಯ ತಪಾಸಣಾ ಅಭಿಯಾನ ಎಪ್ರಿಲ್ 11ರಿಂದ ಪ್ರಾರಂಭವಾಗಿದೆ.
ಕಿಡ್ನಿಗೆ ಸಂಬಂಧಪಟ್ಟ ರಕ್ತ ಪರೀಕ್ಷೆಗಳಾದ ಕಿಡ್ನಿ ರಕ್ತಪರೀಕ್ಷೆ(RFT) ಮಧುಮೇಹ(RBS) ಹಾಗೂ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಸ್ಕ್ಯಾನಿಂಗ್ ಮತ್ತು ಮೂತ್ರಪರೀಕ್ಷೆಗೆ ಸಾಮಾನ್ಯವಾಗಿ 2500ರೂ. ವೆಚ್ಚ ತಗುಲುತ್ತದೆ. ಆದರೆ ಅಭಿಯಾನದ ಭಾಗವಾಗಿ ಈ ಪರೀಕ್ಷೆಗಳನ್ನು ಜನಪ್ರಿಯ ಆಸ್ಪತ್ರೆ ವಿಶೇಷ್ ಪ್ಯಾಕೇಜ್ ಆಗಿ 999ರೂ.ಗೆ ಮಾಡಿಕೊಡಲಾಗುತ್ತದೆ.
ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಮೂತ್ರ ಕೋಶ ತಜ್ಞರಾದ ಡಾ. ಮೋಹಿದ್ದಿನ್ ನಫ್ಸೀರ್, ಕಿಡ್ನಿ ತಪಾಸಣಾ ಅಭಿಯಾನ ಬಹಳ ಮುಖ್ಯ. ಜನಪ್ರಿಯ ಆಸ್ಪತ್ರೆಯು ಉತ್ತಮ ಅಭಿಯಾನವನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸದುಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಜನಪ್ರಿಯ ಆಸ್ಪತ್ರೆಯ ಹಿರಿಯ ಮೂತ್ರ ಕೋಶ ತಜ್ಞರಾದ ಡಾ. ಅವಿನಾಶ್ ವಿಶೇಷ ಕಿಡ್ನಿ ತಪಾಸಣಾ ಪ್ಯಾಕೇಜ್ ಬಗ್ಗೆ ಮಾಹಿತಿ ನೀಡಿದರು. ಈ ಅಭಿಯಾನದ ಬಗ್ಗೆ ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಅಬ್ದುಲ್ ಬಷೀರ್ ಮಾತನಾಡಿ, ಮಾನವನ ದೇಹದಲ್ಲಿ ಮೆದುಳು, ಹೃದಯ, ಲಿವರ್ ಮತ್ತು ಕಿಡ್ನಿ ಪ್ರಮುಖ ಅಂಗಗಳು. ಅದರಲ್ಲೂ ಕಿಡ್ನಿ ಅರೋಗ್ಯವನ್ನು ಕಾಪಾಡುವುದು ಬಹಳ ಮುಖ್ಯ.
ಅಧಿಕ ರಕ್ತದೊತ್ತಡ, ಮದುಮೇಹ, ತೀವ್ರತರಹದ ವಾಂತಿ ಭೇದಿ, ದೇಹದ ಯಾವುದೇ ಭಾಗದಲ್ಲಿ ಉಂಟಾಗುವ ನಂಜು(Septic) ಹಾಗೂ ತೀವ್ರತರಹದ ನ್ಯೂಮೋನೀಯ ಈ ಎಲ್ಲಾ ಅಂಗಗಳ ಹಾನಿಗೆ ಕಾರಣವಾಗಬಹುದು. ಈ ಅಭಿಯಾನದಿಂದಾಗಿ ವಿಶೇಷ ಪ್ಯಾಕೇಜ್ ನಲ್ಲಿ ಕಿಡ್ನಿ ತಪಾಸಣೆ ಮಾಡಿಕೊಂಡು ಅರೋಗ್ಯ ಕಾಪಾಡಿಕೊಳ್ಳಲು ಸುವರ್ಣಕಾಶವಿದೆ. ಆದ್ದರಿಂದ ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಅಭಿಯಾನದಲ್ಲಿ ಶ್ರೀಮತಿ ನಶ್ರೀನಾ ಬಶೀರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಕಿರಶ್ ಪರ್ತಿಪಾಡಿ, ನಿರ್ದೇಶಕರಾದ ಡಾ. ನುಮಾನ್ ಮೊಹಮ್ಮದ್, ಡಾ. ಹಸನ್ ಮುಬಾರಕ್, ಡಾ. ತ್ರಿವಿಕ್ರಮ ಭಟ್ ಹಾಗೂ ಅತಿಥಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

