ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ನಿರ್ಮಾಣ ಆಗಿತ್ತು. ಮಂಗಳೂರಲ್ಲಿ ಶಾಂತಿ ನಿರ್ಮಾಣ ನಮ್ಮ ಗುರಿ ಎಂದು ಮಂಗಳೂರಲ್ಲಿ ಮಾಜಿ ಸಚಿವ ರಮಾನಾಥ ರೈ ಹೇಳಿಕೆ ನೀಡಿದ್ದಾರೆ.
ಕೆಲವರಿಗೆ ಶಾಂತಿ ನಿರ್ಮಾಣ ಬೇಡವಾಗಿದೆ. ಕೆಲವರಿಗೆ ಇಲ್ಲಿ ಗಲಾಟೆಯೇ ಬೇಕು. ಕೆಲವರಿಗೆ ಗಲಾಟೆ ಮೂಲಕ ರಾಜಕೀಯ ಮಾಡಲು ಬಯಸುತ್ತಿದ್ದಾರೆಎಂದಿ ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನಡೆದ ಸುದ್ದಿಗೋಷ್ಟಿ ಹೇಳಿದರು.
ನಮಗೆ ಇಲ್ಲಿ ಶಾಂತಿ ಬೇಕು: ಅಶಾಂತಿ ಬೇಡ. ಕೋಮು ಪ್ರಚೋದನೆ ಭಾಷಣದಿಂದ ಅಮಾಯಕರ ಹತ್ಯೆಯಾಗುತ್ತಿದೆ. ಇದಕ್ಕೆ ಬಂಟ್ವಾಳದಲ್ಲಿ ನಡೆದ ಹತ್ಯೆಯೇ ಕಾರಣ. ಪೊಲೀಸರ ಧೈರ್ಯವನ್ನು ಕುಗ್ಗಿಸುವ ಹೇಳಿಕೆಯನ್ನು ಕೆಲವರು ನೀಡುತ್ತಿದ್ದಾರೆ. ಮಣಿಪುರದಲ್ಲಿ ಆದ ಘರ್ಷಣೆ ಮಂಗಳೂರಲ್ಲಿ ಆಗಬಾರ್ದು.
ಮಂಗಳೂರು ಮತ್ತೊಂದು ಮಣಿಪುರ ಆಗಬಾರದು. ಪೊಲೀಸ್ ವ್ಯವಸ್ಥೆಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು. ಪೊಲೀಸರ ಕ್ರಮವನ್ನು ಎಲ್ಲರೂ ಸ್ವಾಗತಿಸಬೇಕು. ಬಿಜೆಪಿಯವರು ಅಂದು ಶಾಂತಿ ಸಭೆಗೆ ಬರುತ್ತಿರಲಿಲ್ಲ ಎಂದು ಮಂಗಳೂರಲ್ಲಿ ಮಾಜಿ ಸಚಿವ ರಮಾನಾಥ ರೈ ಹೇಳಿಕೆ ನೀಡಿದರು.

