ಉಳ್ಳಾಲ: ತಾಂತ್ರಿಕ ದೋಷದಿಂದ ಫಿಶ್ ಮಿಲ್ ಲಾರಿಯಿಂದ ತೈಲ ಸೋರಿಕೆಯಾಗಿರುವ ಘಟನೆ ಗುರುವಾರ ರಾತ್ರಿ ಉಳ್ಳಾಲ ಬೈಲಿನಲ್ಲಿ ನಡೆದಿದೆ.

ಕೋಟೆಪುರ ಫಿಶ್ ಮಿಲ್ ಕಾರ್ಖಾನೆಯಿಂದ ಹೊತ್ತೊಯ್ಯುತಿದ್ದ ಕ್ಯಾಂಟರ್ ನಲ್ಲಿ ತಾಂತ್ರಿಕ ದೋಷ ದಿಂದ ಮೀನಿನ ಎಣ್ಣೆ ರಸ್ತೆಯಲ್ಲೇ ಸೋರಿಕೆಯಾಗಿದೆ.

ಮೀನಿನ ಎಣ್ಣೆ ಸೋರಿಕೆಯಿಂದ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಆಕ್ರೋಶಗೊಂಡ ಸ್ಥಳೀಯರು ಮೀನಿನ ಕ್ಯಾಂಟರ್ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ಉಳ್ಳಾಲ ಬೈಲ್ ತನಕ, ಕೆಲಕಾಲ ಏಕಮುಖ ರಸ್ತೆಯ ಸಂಚಾರ ಸ್ಥಗಿತವಾಗಿದೆ.

View this post on Instagram

A post shared by News Karnataka (@newskarnataka)