ಮಂಗಳೂರು : ಜಲಸಿರಿ ಅಥವಾ ಒಳಚರಂಡಿಗೆ ಸಂಬಂಧಿಸಿ ನಡೆಯುತ್ತಿರುವ ಕಾಮಗಾರಿಯ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಮುಂದಿನ ಎರಡೂವರೆ ತಿಂಗಳ ಅವಧಿಯಲ್ಲಿ ಯಾವುದೇ ಹೊಸತಾಗಿ ಗುಂಡಿ ಅಗೆಯುವುದು ಅಥವಾ ರಸ್ತೆ ಅಗೆತ ಕಾರ್ಯಕ್ಕೆ ಅವಕಾಶ ಇರುವುದಿಲ್ಲ.

ದ.ಕ. ಜಿಲ್ಲೆಯಲ್ಲಿ ಒಟ್ಟು 92 ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾ ಗಿದೆ. ಬೆಳ್ತಂಗಡಿಯಲ್ಲಿ ಗರಿಷ್ಟ 32 ಹಾಗೂ ಉಳ್ಳಾಲದಲ್ಲಿ ಕನಿಷ್ಟ 3 ಸಂಭವನೀಯ ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಲಾಗಿದೆ.

88 ಕಡೆ ಸಂಭವನೀಯ ಭೂಕುಸಿತ ಪ್ರದೇಶವೆಂದು ಗುರುತಿಸಲಾಗಿದೆ. ಇದು ಕೂಡಾ ಬೆಳ್ತಂಗಡಿಯಲ್ಲಿ ಗರಿಷ್ಠ 35ಹಾಗೂ ಪುತ್ತೂರಿನಲ್ಲಿ ಕನಿಷ್ಟ 3 ಕಡೆ ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

View this post on Instagram

A post shared by News Karnataka (@newskarnataka)