ಮಂಗಳೂರು: ಯೆನೆಪೊಯ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಪೌಷ್ಠಿಕಶಾಸ್ತ್ರ ಹಾಗೂ ಆಹಾರಶಾಸ್ತ್ರ ವಿಭಾಗದ ವತಿಯಿಂದ ರಾಷ್ಟ್ರೀಯ ಪೋಷಣ ಮಾಸ್ 2025 ಸಮಾರೋಪ ಸಮಾರಂಭವನ್ನು ವೈಎನ್‌ವೈಸಿಎಸ್‌ಎಚ್ ಸಭಾಂಗಣದಲ್ಲಿ ನೆರವೇರಿಸಲಾಯಿತು.

ಪ್ರಾಂಶುಪಾಲರಾದ ಡಾ. ಪುನೀತ್ ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಡಾ. ವೀರಜ್ ಹೆಗ್ಡೆ, ಪ್ರಾಧ್ಯಾಪಕರೂ, ಮುಖ್ಯಸ್ಥರೂ ಆಗಿರುವ ಸ್ವಸ್ಥವೃತ್ತ ಮತ್ತು ಯೋಗ ವಿಭಾಗ, ಯೆನೆಪೊಯ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಭಾಗವಹಿಸಿದರು.

ತಿಂಗಳ ಪೂರ್ತಿ ನಡೆದ ಈ ಆಚರಣೆಯ ಅಂಗವಾಗಿ ಪ್ರಶ್ನೋತ್ತರ ಸ್ಪರ್ಧೆ, ರೀಲ್ಸ್ ಸ್ಪರ್ಧೆ, ಸಾಂಪ್ರದಾಯಿಕ ಅಡುಗೆ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು. ವಿದ್ಯಾರ್ಥಿಗಳ ಲೇಖನಗಳನ್ನು ಒಳಗೊಂಡ “ಪೌಷ್ಟಿಕಮ್” ಮಾಸಪತ್ರಿಕೆ ಬಿಡುಗಡೆಗೊಂಡಿತು ಮತ್ತು ಉತ್ತಮ ಲೇಖನಕ್ಕೆ ಬಹುಮಾನ ನೀಡಲಾಯಿತು. ಕಾರ್ಯಕ್ರಮವನ್ನು ಡಾ. ಸುನಿತಾ ಮತ್ತು ಶ್ರೀ ಅಜಿತ್ ಯಶಸ್ವಿಯಾಗಿ ಸಂಯೋಜಿಸಿದರು.