ಮಂಗಳೂರು : ನಮ್ಮ ಸಂಸ್ಥೆಯ ವಿನಂತಿಯ ಮೇರೆಗೆ ಕ್ರಿಷ ವಟಿ ಬರೆದಿರುವ ವಟಿಕುಟೀರ ಪ್ರಕಾಶನ ಬೆಂಗಳೂರು ಇವರ ರಾಷ್ಟ್ರ ರಕ್ಷಣೆಯಲ್ಲಿ ಕರುನಾಡ ವೀರರು ಭಾಗ – ೧ ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಂಗಳೂರಿನಲ್ಲಿ ನಡೆಯಿತು.

ಪುಸ್ತಕವನ್ನು ಬ್ರಿಗೇಡಿಯರ್ ಐ. ಎನ್ .ರೈ ಬಿಡುಗಡೆ ಗೊಳಿಸಿದರು.ಅಧ್ಯಕ್ಷತೆಯನ್ನು ಕರ್ನಲ್ ನಿಟ್ಟೇಗುತ್ತು ಶರತ್ ಭಂಡಾರಿ, ಅಥಿತಿಗಳಾಗಿ ಲಯನ್. ಜಯ ರಾಜ್ ಪ್ರಕಾಶ್, ಸರ್ಜಾಂಟ್ ಶ್ರೀಕಾಂತ್ ಶೆಟ್ಟಿ ಬಾಳ,ಪ್ರಭಾ ಕಾಮತ್ ಹುಂಡಿ, ಮಹಾಬಲ ಪೂಜಾರಿ ಹಾಗೂ ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಅಧ್ಯಕ್ಷರಾದ ಸತ್ಯಜಿತ್ ಸುರತ್ಕಲ್ ರಾಷ್ಟ್ರ ರಕ್ಷಣೆಯಲ್ಲಿ ಕರುನಾಡ ವೀರರು ಭಾಗ – ೧ ಪುಸ್ತಕ ಇದ್ರ ಬಗ್ಗೆ ಮಾಹಿತಿಯನ್ನ ನೀಡಿದರು ಬಳಿಕ, ಪುಸ್ತಕವನ್ನು ಬ್ರಿಗೇಡಿಯರ್ ಐ. ಎನ್ .ರೈ ಬಿಡುಗಡೆಗೊಳಿಸಿ ಸಭೆಯನ್ನ ಉದ್ದೇಶಿಸಿ ಮಾತನಾಡಿದರು.