ಮಂಗಳೂರು : ಕರಾವಳಿ ಪ್ರದೇಶವು ಕಲೆ, ಸಂಸ್ಕೃತಿ, ಅಚಾರ ವಿಚಾರದ ಉನ್ನತ ತಳಹದಿ ಹೊಂದಿರುವ ಪುಣ್ಯಭೂಮಿ. ಇಲ್ಲಿನ ಪ್ರತಿ ಆಚರಣೆಯಲ್ಲಿಯೂ ಸತ್ವವಿದೆ. ಅದೇ ರೀತಿ ಕರಾವಳಿಯಲ್ಲಿ ಆಚರಿಸಲಾಗುವ ನವರಾತ್ರಿ ಉತ್ಸವ ದೇಶ ವಿದೇಶದಲ್ಲಿ ಪ್ರಸಿದ್ದಿ ಪಡೆದಿದೆ.
ಇಂತಹ ಪುಣ್ಯ ಪರ್ವಕಾಲ ನವರಾತ್ರಿಯ ಶುಭ ಸಂದರ್ಭದಲ್ಲಿ ತುಳುವರ ಸಂಸ್ಕೃತಿ, ಕಲೆ ಹಾಗೂ ಹಿಂದುತ್ವದ ಅರಿವು ಮೂಡಿಸುವ ಉದ್ದೇಶದಿಂದ ದಸರಾ ನವರಾತ್ರಿಯ ಸುಸಂದರ್ಭದಲ್ಲಿ ಮಂಗಳೂರಿನ ಶರಧಿ ಪ್ರತಿಷ್ಠಾನವು ಸೆಪ್ಟೆಂಬರ್ 28 ರಂದು ಶಾರದಾ ವಿದ್ಯಾಲಯ, ಮಂಗಳೂರು ನಲ್ಲಿ ಮೂರನೇ ವರ್ಷದ ಅದ್ದೂರಿ ಕಾರ್ಯಕ್ರಮವಾದ ಮಕ್ಕಳ ಮುದ್ದು ಶಾರದೆ ಮತ್ತು ನವದುರ್ಗೆಯರ ವೇಷ ಸ್ಪರ್ಧೆಯನ್ನು ಆಯೋಜಿಸುತ್ತಿದೆ.
ಈ ಬಾರಿ ನವದುರ್ಗೆ ಮತ್ತು ಮುದ್ದು ಶಾರದೆ ಎಂಬ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಸ್ಪರ್ಧೆ ಜರುಗಲಿದ್ದು ಸ್ಪರ್ಧಾಳುಗಳು ಅವರು ಭಾಗವಹಿಸಲು ಇಚ್ಚಿಸುವ ವಿಭಾಗದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ಮಕ್ಕಳಲ್ಲಿ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗುತ್ತಿದ್ದು, ಕರಾವಳಿಯ ಅಂದರೆ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡಿನ ವ್ಯಾಪ್ತಿಯ ಮಕ್ಕಳಿಗಾಗಿ ಈ ಸ್ಪರ್ಧೆ ಆಯೋಜಿಸಲಾಗುತ್ತಿದೆ.
ಈ ಸ್ಪರ್ಧೆ ಕೇವಲ, ಫೋಟೋ ಸ್ಪರ್ಧೆಯಾಗಿ ಉಳಿಯಬಾರದು ಎಂಬ ಉದ್ದೇಶವನ್ನು ಸಂಘಟಕರು ಹೊಂದಿದ್ದು, ಇದೇ ಕಾರಣಕ್ಕಾಗಿ ಸ್ತಬ್ಧಚಿತ್ರ, ನೃತ್ಯ, ಅಭಿನಯ, ಶ್ಲೋಕ, ಹಾಡು ಹಾಡಲು ಅವಕಾಶ ನೀಡಲಾಗಿದೆ. ಅದೇ ರೀತಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗುವುದು ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿಜೇತರಿಗೆ ನಗದು ಪ್ರೋತ್ಸಾಹ, ನೆನಪಿನ ಕಾಣಿಕೆ ನೀಡಿ ಪುರಸ್ಕರಿಸಲಾಗುವುದು ಸ್ಪರ್ದೆಗೆ ಯಾವುದೇ ಶುಲ್ಕ ಇರುವುದಿಲ್ಲ.ಸ್ಪರ್ಧಾ ನೊಂದಣಿಗೆ សំ ៩: 25-09-೨೦೨೫ ನೋಂದಣಿ ಕೇವಲ ವಾಟ್ಸಾಪ್ ಮೂಲಕ ಮಾತ್ರ (ಸಂಖ್ಯೆ) -8073214624
ಸಾಧಕ ಚಿಣ್ಣರಿಗೆ ಗೌರವ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ತೋರಿದ ಚಿಣ್ಣರನ್ನು ಸನ್ಮಾನಿಸಲಾಗುವುದು ಮಂಗಳೂರಿನ ಶರಧಿಪ್ರತಿಷ್ಠಾನವು ಕಳೆದ 2 (2019 ಮತ್ತು 2024) ವರ್ಷಗಳಲ್ಲಿ ಮುದ್ದು ಶಾರದೆ, ನವದುರ್ಗೆ ವೇಷ ಸ್ಪರ್ಧೆ ಆಯೋಜಿಸಿದ್ದು, ಬಹಳ ಅದ್ಭುತವಾಗಿ ಯಶಸ್ಸು ಕಂಡಿತ್ತು. ಈ ಬಾರಿ ಮತ್ತೊಮ್ಮೆ ಮಂಗಳೂರಿನಲ್ಲಿ ಸ್ಪರ್ಧೆ ಆಯೋಜಿಸುತ್ತಿರುವುದು ವಿಶೇಷ.
ಈ ಬಾರಿ ಸ್ಪರ್ಧೆಯಲ್ಲಿ 250ಕ್ಕೂ ಅಧಿಕ ಚಿಣ್ಣರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಬೆಳಗ್ಗೆ 9ರಿಂದ ಸಂಜೆವರೆಗೆ ನಡೆಯುವ ಈ ಸ್ಪರ್ಧೆಯು ಚಿಣ್ಣರ ಪ್ರತಿಭಾ ಕೌಶಲವನ್ನು ಒರೆಗೆ ಹಚ್ಚಲು ವೇದಿಕೆಯಾಗಲಿದೆ ಎಂದು ಸಂಘಟಕರಾದ ಜಗದೀಶ್ ಶೆಟ್ಟಿ ಬಿಜೈ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

