ಮಂಗಳೂರು: ನಂದಿನಿ ನದಿ ನೀರು ಕಲುಷಿತ ವಿಚಾರವಾಗಿ ದಕ್ಷಿಣ ಕನ್ನಡ ಜಿಲ್ಲಾ ದಿಶಾ ಸಭೆಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿಕೆ ನೀಡಿದ್ದಾರೆ. ನಂದಿನಿ ನದಿಯಲ್ಲಿ ಕಂಡೇವು ಜಾತ್ರೆ ನಡೆಯುತ್ತೆ. ಆದ್ರೆ ಇದೀಗಾ ಈ ನದಿ ನೀರು ಸ್ಥಳೀಯ ಸಂಸ್ಥೆಗಳು ಡ್ರೈನೇಜ್ ಸೇರಿ‌ ಕಲುಷಿತ ಆಗುತ್ತಿದೆ ಎಂದರು.

ನದಿ ನೀರಿನ ಕಲುಷಿತ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ.ಕಳೆದ ಹಲವಾರು ವರ್ಷಗಳಿಂದ ಈ ಬಗ್ಗೆ ಮನವಿ ಪ್ರತಿಭಟನೆ ಆಗಿದೆ. ಸ್ಥಳೀಯರು ಮಾರ್ಚ್ ೪ ರಂದು‌ ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದ್ರ ಬಗ್ಗೆ ಮನಪ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕ್ರಮ ಕೈಗೊಳ್ಳದಿದ್ದಾರೆ ಸ್ಥಳೀಯ ಮತ್ತು ನಾವೇ ನೋಡಿಕೊಳ್ಳುತ್ತೆವೆ‌ ಎಂದರು.

ಅಧಿಕಾರಿಗಳು ಈ ಬಗ್ಗೆ ನೀರಿನ ಟೆಸ್ಟ್ ಮಾಡುತ್ತೆವೆ ಎಂಬ ವಿಚಾರ ಮಾತನಾಡಿದರು. ಅಧಿಕಾರಿಗಳು ಆ ಕೆರೆ ನೀರು ಟೆಸ್ಟ್ ಮಾಡೋದು ಬೇಡ ಒಂದು ಗ್ಲಾಸ್ ನೀರು ಕುಡಿಯಲಿ ಸಾಕು ಎಂದು ದಿಶಾ ಸಭೆಯಲ್ಲಿ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿಕೆ ನೀಡಿದರು.