ಮಂಗಳೂರು : ರಸ್ತೆ ಗುಂಡಿ ಮುಚ್ಚಲು ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಂಗಳೂರಿನಲ್ಲಿ ಸಚಿವ ಪ್ರಿಯಾಂಕಾ ಖರ್ಗೆ ಪ್ರತಿಕ್ರಿಯೆ ನೀಡಿದರು. ಬಿಜೆಪಿಯವರಿಗೆ ಕಾಮನ್ ಸೆನ್ಸ್ ಇಲ್ಲ. ಧಾರಾಕಾರವಾಗಿ ಮಳೆ ಸುರಿದಾಗ ಗುಂಡಿ ಬೀಳೋದು ಸಹಜ. ಅವರ ಸರ್ಕಾರ ಇದ್ದಾಗ ಮಳೆ ಬಂದಾಗ ಗುಂಡಿ ಬಿದ್ದಿಲ್ವಾ. ಅವರ ರೀತಿ ನಾವು ನಿರ್ಲಕ್ಷ್ಯ ತೋರುತ್ತಿಲ್ಲ ಎಂದರು.
ಮೈಮೇಲೆ ಎಣ್ಣೆ ಹಾಕೊಂಡು ಜಾರಿಕೊಳ್ತಿಲ್ಲ. ಅದು ನಮ್ಮ ಜವಬ್ದಾರಿ ನಾವು ಮಾಡ್ತೇವೆ. ಈಗಾಗಲೇ SDRF ಅಡಿ ಎಲ್ಲಾ ಜಿಲ್ಲಾಧಿಕಾರಿ ಗಳ ಅಕೌಂಟ್ ಗೆ ಹಣ ಹಾಕಿದ್ದೇವೆ. ದುರಸ್ತಿ ಬಗ್ಗೆ ಎಲ್ಲಾ ಡಿ.ಸಿ, ಸಿ.ಇ.ಒ ಗಳು ಸಿ.ಎಂ ಮುಂದೆ ಪ್ರಸ್ತಾಪ ಇಟ್ಟಿದ್ದಾರೆ. ಸಂಪರ್ಕವನ್ನು ಸರಿಪಡಿಸೋದು ನಮ್ಮ ಮೊದಲ ಆದ್ಯತೆ. ಮಳೆಗಾಲದಲ್ಲಿ ಕೆಲಸ ಮಾಡಲು ಸಾದ್ಯ ಆಗಲ್ಲ. ಈ ಸಾಮಾನ್ಯ ಪ್ರಜ್ಞೆ ಬಿಜೆಪಿಯವರಿಗೆ ಇಲ್ವಾ. ರಾಜ್ಯಾದ್ಯಂತ ರಸ್ತೆ ಗುಂಡಿಯನ್ನು ಬಿಜೆಪಿಯವರು ಮುಚ್ಚಲಿ. ಎಲೆಕ್ಟ್ರಾಲ್ ಬಾಂಡ್ ನಲ್ಲಿ ದುಡ್ಡು ಗಳಿಸಿದ್ದಾರೆ ಅಲ್ವಾ ಖರ್ಚು ಮಾಡಲಿ. ಸರ್ಕಾರ ಇದ್ದಾಗ ಲೂಟಿ ಹೊಡೆದ್ರು. ಈಗ ಲೂಟಿ ಹೊಡದ ಹಣ ಹಾಕ್ತಾರೆ ಬಿಡಿ ಎಂದರು.
ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ವಿಚಾರವಾಗಿ ಮಂಗಳೂರಿನಲ್ಲಿ ಸಚಿವ ಪ್ರಿಯಾಂಕಾ ಖರ್ಗೆ ಪ್ರತಿಕ್ರಿಯೆ ನೀಡಿದರು. ಗಡಿಪಾರು ಆದೇಶ ಕಾನೂನು ಪ್ರಕಾರ ಆಗುತ್ತೆ. ಸುಮ್ಮನೆ ಗಡಿಪಾರು ಮಾಡೋದಕ್ಕೆ ಆಗಲ್ಲ. ಕೆಲವೊಂದು ಮಾನದಂಡಗಳನ್ನು ಪಾಲನೆ ಮಾಡಿ ಮಾಡ್ತಾರೆ. ಆದ್ರೆ ಬಿಜೆಪಿಯವರಿಗೆ ಯಾಕೆ ನೋವು. ಇದು ಪೂರ್ತಿ ಪ್ರಕರಣ RSS ವರ್ಸಸ್ RSS ಇದೆ ಎಂದರು.
ಸುಮ್ನೆ ಸರ್ಕಾರವನ್ನು ಯಾಕೆ ಮಧ್ಯೆ ತರ್ತೀರಿ. ಒಬ್ಬ ವ್ಯಕ್ತಿ ಬಂದು ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ರು. ಈ ಬಗ್ಗೆ ಕ್ರಮ ಕೈಗೊಳ್ಳುವುದು ನಮ್ಮ ಜವಬ್ದಾರಿ. ಕ್ರಮ ಕೈಗೊಂಡಿಲ್ಲ ಅಂದ್ರೆ ಯಾಕೆ ತಗೊಂಡಿಲ್ಲ ಅಂತಿದ್ರು. ಎಸ್ಐಟಿ ಮಾಡಿದ್ರೆ ಧರ್ಮಾಧಿಕಾರಿಗಳಿಗೆ ಕಳಂಕ ತಂದ್ರಿ ಅಂತಾರೆ. ಧರ್ಮಸ್ಥಳ ಚಲೋ ಮಾಡಿದ್ರು. ಯಾರ ಪರವಾಗಿ ಮಾಡಿದ್ರು ಎಂದರು.
ಮಠದ ಪರವಾಗಿ ಮಾಡಿದ್ರು. ವೇದಿಕೆ ಇಳಿದ ತಕ್ಷಣ ಸೌಜನ್ಯ ಮನೆಗೆ ಹೋಗಿದ್ರು. ಸೌಜನ ಮನೆಯಲ್ಲಿ ಅವರ ಸಂಬಂಧಿಕರು ಯಾರ ಹೆಸರು ಹೇಳಿದ್ರು. ವೇದಿಕೆ ಹತ್ತಿದಾಗ ಒಬ್ಬರ ಪರ, ಇಳಿದಾಗ ಅವರ ವಿರುದ್ಧ ನಾ.? ಬಿಜೆಪಿಯವರಿಗೆ ಯಾವ RSS ಬಣದ ಮನವೊಲಿಸಬೇಕೆಂದು ಗೊತ್ತಾಗ್ತ ಇಲ್ಲ. ಅದಕ್ಕೆ ಎರಡು ದೋಣಿ ಮೇಲೆ ಕಾಲಿಟ್ಟಿದ್ದಾರೆ. ಷಡ್ಯಂತ್ರ ಯಾರು ಮಾಡಿರೋದೆಂದು ಬಿಜೆಪಿಯವರು ಬಿಚ್ಚಿಡಲಿ ಎಂದರು.

