ಮಂಗಳೂರು: ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕರೆನೋ ಹೇಳುತ್ತಾರೆ ಆದ್ರೆ ಇವತ್ತು ಇಡೀ ದೇಶವೇ ಪ್ರಶ್ನೆ ಮಾಡುತ್ತಿದೆ. ದೇಶದ ಜನರು ಸ್ಪಷ್ಟ ಉತ್ತರ ಬಯಸುತ್ತಿದ್ದಾರೆ. ಟ್ರಂಪ್ ಘೋಷಣೆ ಮಾಡಿದ್ದು ಸತ್ಯ, ಘೋಷಣೆ ಆದ ನಂತರ ಕದನ ವಿರಾಮ ಘೋಷಣೆ ಆದದ್ದು ಸತ್ಯ ಎಂದರು.
ಟ್ರಂಪ್ ಹೇಳಿದ್ದು ಹಾಗಾದ್ರೆ ಸುಳ್ಳಾ. ಕದನ ವಿರಾಮ ಆಗಿದ್ದು ಪ್ರಪಂಚಕ್ಕೆ ಗೊತ್ತಾಗಿದ್ದು ಟ್ರಂಪ್ ಹೇಳಿದ ಮೇಲೆ. ನಂತರ ಪಾಕಿಸ್ತಾನ ಕೂಡ ಹೇಳಿತು ನಮ್ಮ ದೇಶವೂ ಹೇಳಿತು. ಅವಾಗಲೇ ನಮ್ಮ ದೇಶದವರು ಹೇಳಬೇಕಿತ್ತು. ಪ್ರಧಾನಿ ಏನು ಹೇಳುತ್ತಾರೆ ಅದನ್ನು ನಾವು ಬಯಸುತ್ತಿದ್ದೇವೆ.
ಟ್ರಂಪ್ ಅಂತ ಹೆಸರು ಹೇಳುದಕ್ಕೆ ಮೋದಿ ಭಯ ಪಡುತ್ತಾರೆ. 56 ಇಂಚು ಎದೆ ಇರುವ ಮೋದಿ ಟರ್ಕಿ ಬಗ್ಗೆ ಟೀಕೆ ಮಾಡುತ್ತಾರೆ. ಚೈನಾದ ವೆಪನ್ ಪಾಕಿಸ್ತಾನ ಯೂಸ್ ಮಾಡುತ್ತೆ ಆದ್ರೆ ಚೈನಾ ಬಗ್ಗೆ ಮಾತಾಡಲ್ಲ. ಅಜರ್ ಬೈಜಾನ್ ಹಾಗೂ ಟರ್ಕಿ ಜೊತೆ ವ್ಯಾಪಾರ ನಿಲ್ಲಿಸುತ್ತಾರೆ. ಆದ್ರೆ ಟ್ರಂಪ್ ಬಗ್ಗೆ ಮಾತಾಡಲ್ಲ,ಟ್ರಂಪ್ ಬಗ್ಗೆ ಹೇಳಲು ತಯಾರಿಲ್ಲ ಎಂದರು.
ಕಾಂಗ್ರೆಸ್ ನವರು ಸೈನ್ಯವನ್ನ ಟೀಕೆ ಮಾಡುತ್ತಿಲ್ಲ. ಬಿಜೆಪಿಯ ಸಂಸದ ಸೋಫಿಯ ಖುರೇಷಿ ಬಗ್ಗೆ ಮಾತನಾಡಿದ್ದನ್ನ ನೋಡಿ. ಸಂಸದನ ಸರಕಾರದ ಮೇಲೆ ನಂಬಿಕೆನೇ ಇಲ್ಲ ಕೇಸ್ ದಾಖಲು ಮಾಡುತ್ತಾರೆ ಎಂದು ಕೋರ್ಟ್ ನಿಂದ ಎಫ್ ಐಆರ್ ಆಗೋ ಸನ್ನಿವೇಶ ಬಂದಿದೆ. ಪೆಹಾಲ್ಗಮ್ ನಲ್ಲಿ ಗಂಡಂದಿರನ್ನ ಕಳೆದುಕೊಂಡವರೇ ಇದನ್ನ ಹಿಂದೂ ಮುಸ್ಲಿಂ ಮಾಡಬೇಡಿ ಎಂದಿದ್ದಾರೆ.
ಬಿಜೆಪಿಯ ಕಾರ್ಯಕರ್ತರಿಗೆ ಕೇವಲ ಈ ಪ್ರಕರಣವನ್ನ ಹಿಂದೂ ಮುಸ್ಲಿಂ ಮಾಡಬೇಕು. ಬಿಜೆಪಿ ಕಾರ್ಯಕರ್ತರು ನಮ್ಮ ವಿದೇಶಾಂಗ ಕಾರ್ಯದರ್ಶಿ ಮಗಳಿಗೆ ಏನೆಲ್ಲ ಟೀಕೆ ಮಾಡಿದ್ರು, ಸೀಜ್ ಫೈರ್ ಘೋಷಣೆ ಮಾಡಿದ ಪ್ರಧಾನಿಯನ್ನ ಟ್ರೋಲ್ ಮಾಡಬೇಕಿತ್ತು. ಪ್ರಧಾನಿಯವರ ಒಪ್ಪಿಗೆ ಇಲ್ಲದೆ ಸೀಜ್ ಫೈರ್ ಘೋಷಣೆ ಮಾಡಲು ಸಾಧ್ಯವಿಲ್ಲ. ದೇಶಕ್ಕೆ ಸ್ಪಷ್ಟವಾದ ವಿಚಾರವನ್ನ ರಾಜಕೀಯ ಮಾಡದೆ ಹೇಳಬೇಕು.
ಪಾಕಿಸ್ತಾನದವರು ನಮ್ಮ 5 ಜೆಟ್ ಗಳನ್ನ ಹೊಡೆದು ಹಾಕಿದ್ದೇವೆ ಎಂದಿದ್ದಾರೆ. ಇದಕ್ಕೆ ಉತ್ತರ ಕೊಡೋದಕ್ಕೆ ಮೋದಿ ತಯಾರಿಲ್ಲ. ಪೆಹಾಲ್ಗಮ್ ನಲ್ಲಿ ನರಮೇಧ ಮಾಡಿದವರನ್ನ ಹುಡುಕಿ ಮಣ್ಣುಪಾಲು ಮಾಡುತ್ತೇವೆ ಎಂದ್ರು, ನಾವೆಲ್ಲಾ ಪ್ರಧಾನಿಗಳ ಜೊತೆ ನಿಂತುಕೊಂಡೆವು. ಟ್ರಂಪ್ 20 ಸಲ ಮೀಡಿಯಾ ಮುಂದೆ ಬರುತ್ತಾರೆ,ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಡುತ್ತಾರೆ. ಆದರೆ ನಮ್ಮ ಪ್ರಧಾನಿಗಳಿಗೆ ಯಾರು ಪ್ರಶ್ನೆಗಳನ್ನ ಕೇಳೋಕೆ ಆಗೋದಿಲ್ಲ ಎಂದರು.
ಅವರಿಗೆ ಪತ್ರಕರ್ತರು ಎಂದರೆ ಕ್ಯಾರೆ ಇಲ್ಲ. ಗೋಧಿ ಮೀಡಿಯಾ ಬಗ್ಗೆ ಮೋದಿ ಕಿಂಚಿತ್ತೂ ಕ್ಯಾರೆ ಮಾಡೋಲ್ಲ. ಸರ್ವ ಪಕ್ಷದ ಸಭೆ ಕರೆದು ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಮೋದಿ ಹೇಳಿದ್ದೆಲ್ಲ ವೇದ ವಾಕ್ಯ ಎಂದು ನಾವು ನಂಬಬೇಕಾ. ಇಡೀ ದೇಶದಲ್ಲಿ ಅತೀ ದೊಡ್ಡ ಸುಳ್ಳುಗಾರ ಮೋದಿ. ಸುಳ್ಳಿನ ಆಧಾರದಲ್ಲಿ ದಂತ ಕಥೆ ಹೇಳೋದ್ರಲ್ಲಿ ಮೋದಿ ನಿಸ್ಸಿಮರು. ನಮಗೆ ನಂಬಿಕೆ ಬರೋ ತರ ಉತ್ತರ ನೀಡಲಿ. ಅಧಿವೇಶನ ಕರೀಲಿ ಎಂದು ನಮ್ಮ ಮುಖಂಡರು ಹೇಳಿದ್ದಾರೆ ಅದನ್ನ ಮೊದಲು ಮಾಡಲಿ ಎಂದರು.

