ಮಂಗಳೂರು: ವಿಶ್ವ ಟ್ರಾಮಾ ದಿನ 2025ರ ಅಂಗವಾಗಿ ಕೆಎಂಸಿ ಆಸ್ಪತ್ರೆಯು, ಮಂಗಳೂರು ನಗರ ಪೊಲೀಸ್ಇಲಾಖೆ ಜೊತೆಗೂಡಿ  ನಗರದ ಟ್ರಾಫಿಕ್ನಿರ್ವಹಣೆ ಬೆಂಬಲಿಸುವ ಮತ್ತು ಟ್ರಾಮಾ (ಆಘಾತ) ತಡೆಗಟ್ಟುವಿಕೆಯ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಶೇಷ ರಸ್ತೆ ಸುರಕ್ಷತಾ ಉಪಕ್ರಮವನ್ನು ಆಯೋಜಿಸಿತ್ತು.

ಈ ಸಂದರ್ಭದಲ್ಲಿ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಕಾರ್ಯನಿರ್ವಹಣಾ ಅಧಿಕಾರಿ ಸಘೀರ್ ಸಿದ್ದಿಕಿ, ತುರ್ತು ಮೆಡಿಸಿನ್ಕ್ಲಸ್ಟರ್ ಹೆಡ್ಡಾ ಜೀಧು ರಾಧಾಕೃಷ್ಣನ್ ಎಲ್ಲಾ ಆಸ್ಪತ್ರೆ ಸಿಬ್ಬಂದಿ ಮತ್ತು ಟ್ರಾಫಿಕ್ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ಮಂಗಳೂರು ನಗರ ಟ್ರಾಫಿಕ್ಪೊಲೀಸರಿಗೆ 20 ಟ್ರಾಫಿಕ್ಬ್ಯಾರಿಕೇಡ್ಸ್ಗಳನ್ನ ಹಸ್ತಾಂತರಿಸುವ ಮೂಲಕ ಸಮುದಾಯ ಯೋಗಕ್ಷೇಮ ಮತ್ತು ಅಪಘಾತ ತಡೆಯಲ್ಲಿನ ಬದ್ದತೆಯನ್ನು ಆಸ್ಪತ್ರೆ ಪ್ರದರ್ಶಿಸಿದೆ.

 

 

ವಿಶ್ವ ಆಘಾತ(ಟ್ರಾಮಾ) ದಿನವು , ಹೆಚ್ಚುತ್ತಿರುವ ರಸ್ತೆ ಅಪಘಾತಗಳ ಸಂಖ್ಯೆ ,  ಸಾವುಗಳು ಮತ್ತು ಗಾಯಗಳನ್ನು ತಗ್ಗಿಸಲು  ಮತ್ತು  ತಡೆಗಟ್ಟುವ ಕ್ರಮಗಳ ತುರ್ತು ಅಗತ್ಯವನ್ನು ನೆನಪಿಸುತ್ತದೆ. ವಾಹನ ದಟ್ಟಣೆ ಹೆಚ್ಚುತ್ತಿದ್ದಂತೆ ವಾಹನ ಸವಾರರು ನಗರ ಪ್ರದೇಶಗಳಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳಾದ ಶಾಲೆ, ಕಾಲೇಜು , ಆಸ್ಪತ್ರೆಯಂತಹ ಹೆಚ್ಚು ಜನದಟ್ಟಣೆಯ ಜಂಕ್ಷನ್ಗಳಲ್ಲಿ ಸರಿಯಾದ ರಸ್ತೆ ಸುರಕ್ಷತೆ ನಿಯಮಗಳನ್ನು ಪಾಲಿಸುವುದನ್ನು ಖಾತ್ರಿಪಡಿಸಲು ಬ್ಯಾರಿಕೇಡ್ಸ್ಮತ್ತು ಸ್ಪೀಡ್ಬ್ರೇಕರ್ಸ್ ಮುಖ್ಯವಾಗುತ್ತದೆ.  ಈ ಬ್ಯಾರಿಕೇಡ್ಗಳನ್ನು ಒದಗಿಸುವ ಮೂಲಕ, ಕೆಎಂಸಿ ಆಸ್ಪತ್ರೆ ಮಂಗಳೂರು ರಸ್ತೆ ಸುರಕ್ಷತಾ ಮೂಲಸೌಕರ್ಯವನ್ನು ಬಲಪಡಿಸುವ ಮತ್ತು ವಿಶೇಷವಾಗಿ ಅಪಘಾತ ಪೀಡಿತ ವಲಯಗಳಲ್ಲಿ ಸುಗಮ ಸಂಚಾರದ  ಸೌಲಭ್ಯ ಕಲ್ಪಿಸುವ ಗುರಿಯನ್ನು ಹೊಂದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಉತ್ತರ ವಿಭಾಗದ ಟ್ರಾಫಿಕ್ಇನ್ಸ್ಪೆಕ್ಟರ್ಶ್ರೀ ಶಿವಕುಮಾರ್ಮುಗಳ್ಳಿ “ ಸ್ಪೀಡ್ಲಿಮಿಟ್ಮತ್ತು ಟ್ರಾಫಿಕ್ನಿಯಮಗಳನ್ನು ಪಾಲಿಸಿದ್ದಲ್ಲಿ ಸಾಕಷ್ಟು ರಸ್ತೆ ಅಪಘಾತಗಳನ್ನು ತಡೆಯಬಹುದು. ಇಂದಿನ ಅಗಲವಾದ ಹೈವೇ ರಸ್ತೆಗಳು ಜನರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತವೆ ಆದರೆ ಅತಿಯಾದ ವೇಗದಲ್ಲಿ ವಾಹನ ಚಲಾಯಿಸುವುದು ಸರಿಯಲ್ಲ. ನಾವು  ಬ್ಯಾರಿಕೇಡ್ಗಳನ್ನು ಹೈವೇಯಲ್ಲಿ ಅಳವಡಿಸಿ ಹಲವು ಅಪಘಾತಗಳನ್ನು ತಪ್ಪಿಸಿದ್ದೇವೆ. ವಿಶ್ವ ಆಘಾತ ದಿನದಂದು ಕೆಎಂಸಿ ಆಸ್ಪತ್ರೆ ಕೊಡುಗೆಯಾಗಿ ನೀಡಿರುವ ಈ ಬ್ಯಾರಿಕೇಡ್ಗಳು ನಮ್ಮ ನಗರದಲ್ಲಿ ರಸ್ತೆ ಸುರಕ್ಷತೆಯನ್ನು ಬಲಪಡಿಸುವತ್ತ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಬ್ಯಾರಿಕೇಡ್ಗಳು ಉತ್ತಮ ಸಂಚಾರ ನಿರ್ವಹಣೆ ಮತ್ತು ಅಪಘಾತಗಳನ್ನು ತಡೆಗಟ್ಟುವಿಕೆಗೆ ಸಹಾಯ ಮಾಡುವ ಪ್ರಮುಖ ಆಸ್ತಿಗಳಾಗಿವೆ.ಈ ಪಾಲುದಾರಿಕೆಯು ರಸ್ತೆಗಳಲ್ಲಿ ಅಮೂಲ್ಯ ಜೀವಗಳನ್ನು ಉಳಿಸುವ ನಮ್ಮ ಬದ್ದತೆಯನ್ನು ಬೆಂಬಲಿಸುತ್ತದೆ” ಎಂದರು.

 

ಈ ಸಂದರ್ಭದಲ್ಲಿ ಡಾ. ಜೀಧು ರಾಧಾಕೃಷ್ಣನ್ ಮಾತನಾಡಿ, “ಆಘಾತಕ್ಕೀಡಾಗಿರುವವರ ಆರೈಕೆಯಷ್ಟೇ ಆಘಾತ(ಟ್ರಾಮಾ) ತಡೆಗಟ್ಟುವಿಕೆಯೂ ಮುಖ್ಯವಾಗಿದೆ.  ವಾಹನ ಚಲಾಯಿಸುವಾಗ ಮೊಬೈಲ್ಫೋನ್ನತ್ತ ಗಮನ ಹರಿಸದೇ ವಾಹನ ಚಾಲನೆಯತ್ತ ಗಮನ ಹರಿಸಿದರೆ ಇಂತಹ ಅಪಘಾತಗಳನ್ನು ತಡೆಯಬಹುದು. ಭಾರತವು ಸೆಲ್ಫಿ ಕಾರಣಕ್ಕೆ ಉಂಟಾಗುವ ಸಾವಿನ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ.

ಇದು ತಡೆಯಬಹುದಾದಂತಹ ಅಪಘಾತ. ಟ್ರಾಮಾ ಜಾಗೃತಿ ಕುರಿತಾದ ಈ ರೀತಿಯ ಉಪಕ್ರಮಗಳು ಅಪಘಾತಗಳನ್ನು ಕಡಿಮೆ ಮಾಡಲು ಸಹಾಯ ಮಾಡುವುದಲ್ಲದೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ, ರಸ್ತೆ ಸುರಕ್ಷತೆಯನ್ನು ಖಚಿತಪಡಿಸುತ್ತವೆ. ತುರ್ತು ಪರಿಸ್ಥಿತಿಗಳಿಗೆ ಸಕಾಲಿಕ ಆರೈಕೆ ಒದಗಿಸಲು ನಾವು ಪುತ್ತೂರು, ಚೆರ್ವತ್ತೂರು, ಕಕ್ಕಿಂಜೆ, ಬೆಳ್ತಂಗಡಿ ಮತ್ತು ಕುಂದಾಪುರದಲ್ಲಿ ತುರ್ತು ಕೇಂದ್ರಗಳನ್ನು ಸ್ಥಾಪಿಸಿದ್ದೇವೆ” ಎಂದು ಹೇಳಿದರು.

 

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕೆಎಂಸಿಯ ಪ್ರಾದೇಶಿಕ ಕಾರ್ಯನಿರ್ವಹಣಾ ಅಧಿಕಾರಿ ಸಘೀರ್ ಸಿದ್ದಿಕಿ ” ಆರೋಗ್ಯ ರಕ್ಷಣೆಯನ್ನು ಮೀರಿ ಕೆಎಂಸಿ ಆಸ್ಪತ್ರೆ , ಸಮುದಾಯ ಕಲ್ಯಾಣಕ್ಕೆ ತನ್ನ ಬದ್ಧತೆಯನ್ನು ವಿಸ್ತರಿಸುವಲ್ಲಿ ನಂಬಿಕೆ ಇಡುತ್ತದೆ. ರಸ್ತೆ ಸುರಕ್ಷತೆ ಸುಧಾರಿಸಲು  ಅಧಿಕಾರಿಗಳೊಂದಿಗೆ ಸಹಕರಿಸುವುದು ಕೂಡ ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಲ್ಲಿ ಒಂದು ಉತ್ತಮ ಮಾರ್ಗವಾಗಿದೆ. ನಮ್ಮನ್ನು ರಕ್ಷಿಸುತ್ತಿರುವ ಮಂಗಳೂರು ನಗರ ಪೊಲೀಸರಿಗೆ ಧನ್ಯವಾದ” ಎಂದು ಹೇಳಿದರು.

ಈ ಉಪಕ್ರಮದ ಮೂಲಕ, ಕೆಎಂಸಿ ಆಸ್ಪತ್ರೆ ಮಂಗಳೂರು, ಸಮುದಾಯ ಆರೋಗ್ಯ ಮತ್ತು ಸುರಕ್ಷತೆಗೆ ತನ್ನ ಬದ್ಧತೆಯನ್ನು ಬಲಪಡಿಸಿದೆ.  ಕೇವಲ ಗುಣಮಟ್ಟದ ವೈದ್ಯಕೀಯ ಆರೈಕೆಯನ್ನು ಮಾತ್ರವಲ್ಲದೆ ಸಮಾಜದ ಮೇಲೆ ಶಾಶ್ವತ ಪರಿಣಾಮ ಬೀರುವ ಪೂರ್ವಭಾವಿ ಆರೋಗ್ಯ ಮತ್ತು ಸುರಕ್ಷತಾ ಮಧ್ಯಸ್ಥಿಕೆಗಳನ್ನು ನೀಡುವ ತನ್ನ ವಿಶಾಲ ಧ್ಯೇಯವನ್ನೂ ತಿಳಿಸಿದೆ.