ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಭರತ್ ಶೆಟ್ಟಿ ವೈ ರವರ ಅಧ್ಯಕ್ಷತೆಯಲ್ಲಿ ನಿನ್ನೆ ಮಂಗಳೂರು ತಾಲೂಕು ತ್ರೈಮಾಸಿಕ ಕೆಡಿಪಿ ಸಭೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾ ಅಧಿಕಾರಿಗಳಾದ ಶ್ರೀ ಮಹೇಶ್ ಹೊಳ್ಳ , ಮಂಗಳೂರು ತಾಲೂಕು ತಹಶೀಲ್ದಾರರಾದ ಶ್ರೀ ರಮೇಶ್ ಬಾಬು, ಹಾಜರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಜರಿದ್ದರು.
ಈ ವೇಳೆ ಈ ಕೆಳಗಿನ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಆರೋಗ್ಯ ಇಲಾಖೆ:- ಮಲೇರಿಯಾ ಡೆಂಗ್ಯೂಗಳ ಪರಿಣಾಮಕಾರಿ ನಿಯಂತ್ರಣ ಮತ್ತು ತಡೆಗಟ್ಟುವ ಬಗ್ಗೆ, ಮಂಗಳೂರು ನಗರವನ್ನು ಮಲೇರಿಯಾ ಡೆಂಗ್ಯೂ ಮುಕ್ತ ವಾಗಿಸುವ ಬಗ್ಗೆ
ಆಯುಷ್ ಇಲಾಖೆ:– ಒಟ್ಟು ಇಲಾಖಾ ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಅಂಕಿ ಅಂಶ, ಇಲಾಖಾ ಕಟ್ಟಡ ಕಾಮಗಾರಿ ಸ್ಥಿತಿ ಗತಿ ಬಗ್ಗೆ
ತೋಟಗಾರಿಕೆ:- ಬೆಳೆ ವಿಮೆ ಮಾಡುವಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವುದು, ವಿಮೆ ಮೂಲಕ ಬೆಳೆ ನಷ್ಟ ಪರಿಹಾರ ಪಡೆದುಕೊಳ್ಳುವ ವಿಧಾನ, ಜೇನು ಕೃಷಿ, ಎಣ್ಣೇ ಕಾಳು ಮತ್ತು ಎಣ್ನೇ ತಾಳೆ ಬೆಳೆಗಳ ಬಗ್ಗೆ.
ಕೃಷಿ ಇಲಾಖೆ:- ಬೀಜ ಬಿತ್ತನೆ, ಭತ್ತದ ಕೃಷಿ, ಕೃಷಿ ಸಲಕರಣೇ ಉಪಕರಣೇ ರಿಯಾಯಿತಿ ದರದಲ್ಲಿ ಸಬ್ಸಿಡಿ ಮೂಲಕ ಇಲಾಖೆಯಿಂದ ಪಡೆದುಕೊಳ್ಳುವ ಬಗ್ಗೆ , ಬೆಳೆ ವಿಮೆ ಮಾಡುವಲ್ಲಿ ರೈತರಲ್ಲಿ ಜಾಗೃತಿ ಮೂಡಿಸುವುದು, ವಿಮೆ ಮೂಲಕ ಬೆಳೆ ನಷ್ಟ ಪರಿಹಾರ ಪಡೆದುಕೊಳ್ಳುವ ವಿಧಾನ, ಮತ್ತು ಸಾವಯವ ಕೃಷಿಯತ್ತ ರೈತರನ್ನು ಆಕರ್ಷಿಸುವ ಬಗ್ಗೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:- ಹಾಸ್ಟೆಲ್ ಬೇಡಿಕೆಗೆ ಅನುಗುಣವಾಗಿ ಹಾಸ್ಟೆಲ್ ಲಭ್ಯತೆ ಇಲ್ಲದಿರುವ ಬಗ್ಗೆ, ಖಾಸಗಿ ಸೇವಾ ಸಂಸ್ಥೆಯಿಂದ ನಡೆಸಲಾಗುವ ಅನಾಥಾಲಯಗಳಿಗೆ ಸರಕಾರದ ಸಹಾಯಧನ ಸಕಾಲಕ್ಕೆ ಪಾವತಿ ಆಗುತ್ತಿರುವುದನ್ನ ಖಾತ್ರಿಪಡಿಸಿ, ಆದಷ್ಟು ಬಾಡಿಗೆ ಆದಾರಿತ ಹಾಸ್ಟೆಲ್ ಕಟ್ಟಡ ಅವಲಂಬನೆ ಕಡಿಮೆ ಮಾಡಿ ಜಮೀನು ಗುರುತಿಸಿ ಇಲಾಖಾ ಸ್ವಂತ ಕಟ್ಟಡದಲ್ಲಿ ಹಾಸ್ಟೆಲ್ ನಿರ್ಮಾಣ ಕ್ಕೆ ಇಲಾಖೆ ಮನಸ್ಸು ಮಾಡಬೇಕು. ಪರಿಶಿಷ್ಟ ಜಾತಿ ಕಾಲನಿಗಳ ಅಭಿವೃದ್ದಿಗೆ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಯಾವುದೇ ಅನುದಾನ ಮಂಜೂರಾಗದೇ ಇರುವ ಬಗ್ಗೆ.
ಪಶುಸಂಗೋಪನೆ:- ಪಶುಗಳ ಚುಚುಮ್ದ್ದು ಲಸಿಕಾಕರಣ ಕಾರ್ಯಕ್ರಮ ಗಳ ಪ್ರಗತಿ, ರೇಬಿಸ್ ಪ್ರಕರಣಗಳ ತೀವ್ರತೆ, ಬೀದಿ ನಾಯಿ ಕಡಿತದಿಂದ ರೇಬಿಸಿ ಹರಡುವಿಕೆ ಪ್ರಮಾಣ ಮತ್ತು ಪರಿಣಾಮಕಾರಯಾಗಿ ತಡೆಗಟ್ಟುವಿಕೆ, , ಹೈನುಗಾರಿಕೆಯಲ್ಲಿ ಹೊಸದಾಗಿ ತೊಡಗಿಸಿಕೊಳ್ಳುವ ರೈತರಿಗೆ ಮಾಹಿತಿ ಕಾರ್ಯಾಗಾರ ಏರ್ಪಡಿಸಿ ಶಿಬಿರಗಳನ್ನು ಹಮ್ಮಿಕೊಳ್ಳುವ ಬಗ್ಗೆ.
ಅರಣ್ಯ:- ಕಡಲ ತಡಿಗೆ ಬಂದು ಮೊಟ್ಟೆ ಇಡುವ ಆಮೆ (ಸೀ ಟರ್ಟಲ್ಸ್) ನ ಸಂತಾನ ಅಭಿವೃದ್ಧಿ, ಮೊಟ್ಟೆಗಳನ್ನು ಜತನದಿಂದ ಕಾಪಿಟ್ಟುಕೊಂಡು ಮೊಟ್ಟೆ ಒಡೆದು ಹೊರಗೆ ಬರುವ ಮರಿಗಳನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಸೇರಿಸಲು ಅರಣ್ಯ ಇಲಾಖೆ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ:- ಮಂಜೂರು , ಭರ್ತಿ ಖಾಲಿ ಹುದ್ದೆಗಳ ಮಾಹಿತಿ, ಅಂಗನವಾಡಿಗಳಲಲ್ಲಿ ಮಕ್ಕಳ ದಾಖಲಾತಿ, ನಿಯಮಿತ ಹಾಜರಾತಿ, ಸಾದ್ಯ ಆದಷ್ಟು ಅಂಗನವಾಡಿಘಲನ್ನು ಇಲಾಖಾ ಸ್ವಂತ ಕಟ್ಟಡ ದಲ್ಲಿ ಕಾರ್ಯ ನಿರ್ಹಿಸಲು ಕ್ರಮ ಕೈಗೊಳ್ಳುವುದು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯ ಚಟುವಟಿಕೆಗಳು ಏನು ಎಂಬಿತ್ಯಾದಿ.
ಶಿಕ್ಷಣ:– ಸರಕಾರಿ ಶಾಲೆಗಲಿಗೆ ಮಕ್ಕಳ ದಾಖಲಾತಿ, ಪಠ್ಯ ಪುಸ್ತಕ ಸಕಾಲಕ್ಕೆ ವಿತರಣೆ, ಕಲಿಕೆ ಯಲ್ಲಿ ಹಿಂದಿರುವ ವಿದ್ಯಾರ್ಥಿಗಳ ಬಗೆ ಶಿಕ್ಷಕರು ವಿಶೇಷ ಗಮನ ಹರಿಸಿ, ನಿಗಾ ಇರಿಸಿ ಅವರ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಪೂರಕ ಕ್ರಮ ಕೈಗೊಳ್ಳಬೇಕು.
ಅಕ್ಷರ ದಾಸೋಹ :- ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ಹಾಲು, ಮದ್ಯಾಹ್ನದ ಬಿಸಿ ಊಟ, ಮೊಟ್ಟೆ ಬಾಳೆಹಣ್ಣಿನ ಗುಣ ಮಟ್ಟದ ಬಗ್ಗೆ ಮತ್ತು ಪ್ರಮಾಣದ ಬಗ್ಗೆ
ಕಾರ್ಮಿಕ ಇಲಾಖೆ:- ಕಟ್ಟಡ ಕಾರ್ಮಿಕರು ಕೆಲಸ ಮಾಡುತ್ತಿರುವ ಸ್ಥಳಕ್ಕೆ ಬಂದು ಕಾರ್ಮಿಕರ ಆರೋಗ್ಯ ತಪಾಸಣೆ ಸಲುವಾಗಿ ಸಂಚಾರ ವಾಹನದ ಕಾರ್ಯ ಚಟುವಟಿಕೆ.
ಕೆ.ಎಂ ಎಫ್:- ಈ ಬಾರಿ ಹಾಲು ಸಂಗ್ರಹಣೆಯಲ್ಲಿ ಕೊಂಚ ಪ್ರಮಾಣದ ಪ್ರಮಾಣ ಏರಿಕೆ ಕಂಡು ಬಂದಿರುವ ಬ್ಗಗೆ, ಈ ಏರಿಕೆ ಕಾಣಲು ಕೈಗೊಂಡ ಕ್ರಮಗಳ ಬಗ್ಗೆ.
ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ :- ಜಲ ಜೀವನ್ ಮಿಷನ್ ನಡಿ ಸರಬರಾಜು ಆಗುವ ನೀರು ತಾಂತ್ರಿಕ ಕಾರಣದಿಂದಾಗಿ ಪಂಚಾಯತ್ ಗಳ ಮನೆಗಳಿಗೆ ಸಮರ್ಪಕ ಸರಬರಾಜಾಗದೆ ಇದ್ದು ಈ ಬಗ್ಗೆ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯದ ಸಮನ್ವಯ ಸಾಧಿಸಿ ಯಾವುದೇ ಲೋಪ ವಿಲ್ಲದೇ ಪ್ರತೀ ಮನೆಗೂ ನೀರು ಸರಬರಾಜು ಆಗುವಂತೆ ನೋಡಿಕೋಲ್ಳುವುದು
ಮೆಸ್ಕಾಂ:- ಮೆಸ್ಕಂ ಇಲಾಖೆಗೆ ಪಂಚಾಯತ್ ನಿಂದ ಪಾವತಿಗೆ ಬಾಕಿ ಇರುವ ವಿದ್ಯುತ್ ಬಿಲ್ ಗಳನನು ಸಕಾಲಕ್ಕೆ ಪಾವತಿಸಿ ಬಡ್ಡಿ ಬರದಂತೆ ಈ ರೀತಿ ಬಾಕಿ ಮೊತ್ತ ಇನ್ನನಷ್ಟು ಹೆಚ್ಚು ಆಗದಂತೆ ನಿಯಮಿತವಾಗಿ ಪಂಣಚಾಯತ್ ನಿಂದ ಮೆಸ್ಕಾಂ ಇಲಾಖೆಗೆ ಬಾಕಿ ಪಾವತಿಗೆ ಆದ್ಯತೆ ಮೇರೆಗ ಕ್ರಮ ಕೈಗೊಳ್ಳುವಂತೆ ಚರ್ಚಿಸಲಾಯಿತು.

