ಮಂಗಳೂರು: ಮಂಗಳೂರು, ಸುಬ್ರಹ್ಮಣ್ಯ, ಕಬಕ ರಸ್ತೆ ರೈಲು ವಿಸ್ತರಣೆ ಬೇಡಿಕೆಗೆ ಈಡೇರಿದ್ದು ಚಾಲನೆ ಸಿಗಲಿದೆ. ಇದರ ಚಾಲನೆಯನ್ನು ರಾಜ್ಯ ರೈಲ್ವೆ ಸಚಿವರಾದ ವಿ ಸೋಮಣ್ಣ ನೆರವೇರಿಸಲಿದ್ದಾರೆ.

ಈ ರೈಲು ನಿತ್ಯ ಮೂರು ಟ್ರಿಪ್ ಮಾಡಲಿದ್ದು. ಈ ಸೇವೆ ಮಂಗಳೂರು ಸುಬ್ರಹ್ಮಣ್ಯ ಯಾತ್ರಿಗಳಿಗೆ ಅನುಕೂಲ ಆಗಲಿದೆ ಎಂದು ಕೇಂದ್ರ ಅಧಿವೇಶನದ ಬಳಿಕ ಮಂಗಳೂರು ಸಂಸದರಿಂದ ಸುದ್ದಿಗೋಷ್ಟಿ ನಡೆಸಿ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

ಮಂಗಳೂರು ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಪೋರ್ಟ್ ಕನೆಕ್ಟ್ ರಸ್ತೆಯಾಗಿದ್ದು, ಈ ರಸ್ತೆ ಗೊಂದಲದಲ್ಲಿ ಇತ್ತು. ಮುಗ್ರೋಡಿ ಗುತ್ತಿಗೆ ಕಂಪನಿಗೆ ಇದರ ಕಾಮಗಾರಿ ಸಿಕ್ಕಿದೆ. ಕೇಂದ್ರ ಸಚಿವರು ಇದಕ್ಕೆ ೨೬ ಕೋಟಿ ಬಿಡುಗಡೆ ಮಾಡಿದ್ದಾರೆ. ೧೩ ರಂದು ಜಿಲ್ಲೆಯ ಎಂಟು ತಾಲೂಕು ಗಳಿಗೆ ಕಬಡ್ಡಿ ಮ್ಯಾಟ್ ವಿತರಣೆ ಮಾಡಿದ್ದಾರೆ.

ವಕ್ಪ್ ಬಿಲ್ ಅನುಮೋದನೆ ಮಾಡುವ ಮೂಲಕ ಸಂಕಲ್ಪಕ್ಕೆ ಅನುಗುಣವಾಗಿ ಕೆಲಸ ಆಗ್ತಾ ಇದೆ. ಈ‌ ವಿಚಾರಕ್ಕೆ ಕೇಂದ್ರ ಸಚಿವರಿಗೆ ವಿಶೇಷ ಅಭಿನಂದನೆ ತಿಳಿಸಿತ್ತೇನೆ. ಹೆಚ್ಚಿನ ಹಗರಣ ಆಗಿರುವಂತದ್ದು ನಮ್ಮ ಜಿಲ್ಲೆಯಲ್ಲೇ. ಅದನ್ನು ಅನ್ವರ್ ಮಾಣಿಪಾಡಿ ಸರ್ಕಾರದ ಗಮನಕ್ಕೆ ತಂದಿದ್ರು. ಅನೇಕ ಕಾಯ್ದೆಗಳ ತಿದ್ದುಪಡಿ ಈ ಅಧಿವೇಶನದಲ್ಲಿ ಆಗಿದೆ.

ಅಧಿವೇಶನದಲ್ಲಿ ಅನೇಕ ವಿಚಾರಗಳ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಶೂನ್ಯ ವೇಳೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ೪೫ ಭೂ ಒತ್ತವರಿ ಬೇಡಿಕೆ. ಇದರ ಬಗ್ಗೆ ಚರ್ಚೆಗಳಾಗಿದ್ದು ಮುಂದಿನ ದಿನಗಳಲ್ಲಿ ಇದ್ರ ಕಾರ್ಯ ಆಗಲಿದೆ. ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರ ಅಂಗವೈಕಲ್ಯತೆ ನೀಡುವ ಹಣದ ಬಗ್ಗೆ ಪ್ರಶ್ನೆಯಾಗಿದೆ.

ಪ್ರಧಾನಿಯವರನ್ನು ಹೆತ್ತವರೊಂದಿಗೆ ಭೇಟಿಯಾಗುವ ಭಾಗ್ಯ ದೊರಕಿದೆ. ಇದಕ್ಕೆ ನಾಡಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ. ಪೆರಿಯ ಶಾಂತಿ ಯಿಂದ ಉಜಿರೆ ವರೆಗೆ ರಸ್ತೆ ಕಾಮಗಾರಿಯಾಗಿದೆ. ಗುರುವಾಯನಕೆರೆ ಬಜಗೋಳಿ ಸ್ಪರ್ ರೋಡ್ ವಿಸ್ತರಣೆಯಾಗಿದೆ.

ಬೆಂಗಳೂರು ಶಿರಾಡಿ ಅಭಿವೃದ್ಧಿಗೆ ಸೂಚನೆ ನೀಡಲಾಗಿದೆ. ಮಂಗಳೂರು ಬೆಂಗಳೂರು ರಸ್ತೆಯನ್ನು ಆದ್ಯತೆ ಆಗಿದೆ ತೆಗೆದು ರಾಜ್ಯ ಸರ್ಕಾರ ಸಹಕಾರ ನೀಡಬೇಕಿದೆ. ಕೋಸ್ಟ್ ಗಾರ್ಡ್ ಅಕಾಡೆಮಿ ಸಾವಿರ ಕೋಟಿಗಿಂತ ಮೇಲಿದ್ದು ಕ್ಯಾಬಿನೆಟ್ ಗೆ ಕಳುಹಿಸಲಾಗಿತ್ತು. ಇದೀಗಾ ಕ್ಯಾಬಿನೆಟ್ ನೋಟ್ಗೆ ಹಾಕಲಾಗಿದ್ದು ಮುಂದಿನ ದಿನಗಳಲ್ಲಿ ಇದರ ಕಾಮಗಾರಿ ಆಗಲಿದೆ ಎಂದರು.