ಮಂಗಳೂರು : ಏರ್ ಇಂಡಿಯಾ ಎಕ್ಸ್ಪ್ರೆಸ್ ಮಂಗಳೂರು ಹಾಗೂ ಮಹಾರಾಷ್ಟ್ರದ ಐಟಿ ರಾಜಧಾನಿ ೩ ಪುಣೆ ಮಧ್ಯೆ ಶನಿವಾರದಿಂದ ನೇರ ವಿಮಾನ ಸೇವೆ ಆರಂಭಿಸಿದೆ. ಉದ್ಘಾಟನಾ ವಿಮಾನವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 8ಕ್ಕೆ ಹೊರಟು 9.25ಕ್ಕೆ ಪುಣೆ ತಲಪಿತು.
ಪುಣೆಯಿಂದ 9.55ಕ್ಕೆ ಹೊರಟು ಮಂಗಳೂರಿಗೆ 11.458 ಆಗಮಿಸಿತು.ಕೇವಲ ಬೆಳಗ್ಗಿನ ಸೇವೆಯಷ್ಟೇ ಅಲ್ಲದೆ ಹೆಚ್ಚುತ್ತಿರುವ ಬೇಡಿಕೆ ಗಮನದಲ್ಲಿರಿಸಿ ಸಂಜೆಯ ಸೇವೆಗಳನ್ನೂ ಆರಂಭಿಸಲಾಗಿದೆ. ಸಂಜೆ 6.308 ಮಂಗಳೂರಿನಿಂದ ಹೊರಟು ರಾತ್ರಿ 8ಕ್ಕೆ ಪುಣೆಗೆ ಹಾಗೂ ಮರುಪ್ರಯಾಣದಲ್ಲಿ ಪುಣೆಯಿಂದ ರಾತ್ರಿ 8.358 ಹೊರಟು 10.058 ಮಂಗಳೂರಿಗೆ ತಲುಪಲಿದೆ.

