ಮಂಗಳೂರು: ಚಾಲಕರ ಸಮುದಾಯ, ಶ್ರೀ ಪೂರ್ಣೇಶ್ & ಶ್ರೀ ಸಂದೀಪ್ ಡಿಸಿಲ್ವಾ ಮತ್ತು ಅವರ ತಂಡದ ಪ್ರತಿನಿಧಿತ್ವದಲ್ಲಿ, ಸ್ಥಳೀಯ ಟ್ಯಾಕ್ಸಿ ಸೇವೆಗಳಿಗೆ ಆದ್ಯತೆಯ ಡಿಜಿಟಲ್ ಪರಿಹಾರವಾಗಿ Towner ಮೊಬೈಲ್ ಟ್ಯಾಕ್ಸಿ ಮೀಟರ್ ಅಪ್ಲಿಕೇಶನ್ ಅನ್ನು ಇಂದು ಆಳವಡಿಸಿಕೊಂಡಿರುವುದಾಗಿ ಘೋಷಿಸಿದೆ.
ಕಳೆದ ಒಂದು ತಿಂಗಳಿಂದ ಅಪ್ಲಿಕೇಶನ್‌ನ್ನು ಪರಿಶೀಲಿಸಿದ ಬಳಿಕ, ಚಾಲಕರು ಇದರೆ ನ್ಯಾಯವಾದ ಬೆಲೆ ನಿಗದಿ, ಪಾರದರ್ಶಕತೆ ಮತ್ತು ಸ್ವತಂತ್ರತೆಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದರು- ಇದು ಚಾಲಕರು ಮತ್ತು ಪ್ರಯಾಣಿಕರು ಎದುರಿಸುತ್ತಿದ್ದ ದೀರ್ಘಕಾಲೀನ ಸವಾಲುಗಳಿಗೆ ಪರಿಹಾರ ನೀಡುತ್ತದೆ.
ಈ ಬೆಳವಣಿಗೆ ಭಾರತ ಸರ್ಕಾರದ “Taxi Sahakar” ಉಪಕ್ರಮಕ್ಕೆ ಹೊಂದಿಕೆಯಾಗಿದ್ದು, ಸಮುದಾಯದ ಚಾಲಿತ ಸಂಚಾರ ವೇದಿಕೆಗಳನ್ನು ಉತ್ತೇಜಿಸುತ್ತದೆ. Towner ಅಪ್ಲಿಕೇಶನ್ ವಿಶೇಷವಾಗಿ ಈ ಕೆಳಗಿನ ರೀತಿಯಲ್ಲಿ ಶಕ್ತಿಮಂತರಿಸುತ್ತದೆ. ಚಾಲಕರಿಗೆ ತಮ್ಮದೇ ಆದ ದರ ನಿಗದಿಪಡಿಸುವ ಹಕ್ಕು, ನ್ಯಾಯಸಮ್ಮತ ಆದಾಯ, ಮತ್ತು ಶೋಷಣಾತ್ಮಕ ಮಾದರಿಗಳಿಂದ ದೂರವಿರುವ ಸಾಧ್ಯತೆ.
ಪ್ರಯಾಣಿಕರಿಗೆ- “ಒನ್ ಇಂಡಿಯಾ, ಒನ್ ಟ್ಯಾಕ್ಸಿ (DIOT)* ಸಂವೇದನೆಯೊಂದಿಗೆ ಮಾನಕೃತ, ಕೈಗೆಟುಕುವ ಮತ್ತು ವಿಶ್ವಾಸಾರ್ಹ ಸೇವೆ. ಚಾಲಕರ ಪರವಾಗಿ ಮಾತನಾಡಿದ ಸಂದೀಪ್ .ವರ್ಷಾಂತರಗಳಿಂದ ಚಾಲಕರು ಅನ್ಯಾಯಪೂರ್ಣ ವೇದಿಕೆಗಳು ಮತ್ತು ಅಸ್ಥಿರ ಪ್ರೋತ್ಸಾಹದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ Towner ನಮಗೆ ಮತ್ತೆ ಸ್ವತಂತ್ರತೆ ಮತ್ತು ಗೌರವ ನೀಡಿದೆ ನಾವು ಇದನ್ನು ಮಂಗಳೂರಿಗೆ ಡೀಫಾಲ್ಸ್ ಪರಿಹಾರವನ್ನಾಗಿಸಲು ಬಯಸುತ್ತೇವೆ.
Towner ಸಂಸ್ಥಾಪಕರೂ ಕೂಡ ಮಂಗಳೂರಿನ ನಮುದಾಯವನ್ನು ಭೇಟಿ ಮಾಡಿ, ಚಾಲಕರಿಗೆ ಪ್ರೋತ್ಸಾಹ ನೀಡಿ, ನ್ಯಾಯಸಮ್ಮತ ಮತ್ತು ಸ್ಥಿರ ಟ್ಯಾಕ್ಸಿ ಪರಿಸರವನ್ನು ನಿರ್ಮಿಸುವ ತಮ್ಮ ದಿಟ್ಟ ನಿಲುವನ್ನು ಪುನರ್ ದೃಢಪಡಿಸಿದರು.
ಚಾಲಕರ ಸಮುದಾಯವು KDEM (ಕರ್ನಾಟಕ ಡಿಜಿಟಲ್ ಲರ್ಥವ್ಯವಸ್ಥೆ ಮಿಷನ್) ಗೆ ತಮ್ಮ ಅಭಾರವನ್ನು ವ್ಯಕ್ತಪಡಿಸಿದೆ. KDEM ಸರ್ಕಾರ ಮತ್ತು ಉದ್ಯಮದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಿ, Towner ಅಪ್ಲಿಕೇಶನ್ ಮಂಗಳೂರಿಗೆ ತಲುಪಲು ಮುಖ್ಯ ಪಾತ್ರವಹಿಸಿದೆ. ಚಾಲಕರು ಈ ರೀತಿಯ ಸಾರ್ವಜನಿಕ ಸಮಸ್ಯೆ ಪರಿಹಾರ ಪ್ರಯತ್ನಗಳು ಮುಂದುವರಿಯಲಿ ಎಂಬ ಆಶಯವನ್ನೂ ವ್ಯಕ್ತಪಡಿಸಿದರು.

