ಮಂಗಳೂರು: ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣವು 2024-25ನೇ ಹಣಕಾಸು ವರ್ಷದಲ್ಲಿ ದಾಖಲೆಯ 2.32 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಿದೆ.
ಇದು 2019-20ರಲ್ಲಿ ಕೋವಿಡ್-19 ಪೂರ್ವದಲ್ಲಿ ನಿರ್ವಹಿಸಿದ ಸಂಖ್ಯೆಗಿಂತ 24.10 ಶೇ. ಬೆಳವಣಿಗೆ ಕಂಡಿರುವುದು ಸೂಚಿಸುತ್ತದೆ. 2023-24ನೇ ಹಣಕಾಸು ವರ್ಷಕ್ಕಿಂತ 2024-25ನೇ ಹಣಕಾಸು ವರ್ಷದಲ್ಲಿ 15.34 ಶೇ. ಹೆಚ್ಚಿನ ಪ್ರಯಾಣಿಕರನ್ನು ನಿರ್ವಹಿಸಲಾಗಿದೆ 2025, ಏಪ್ರಿಲ್ 12 ರಂದು ದಿನವೊಂದರಲ್ಲೇ ಗರಿಷ್ಠ 8,103 ಪ್ರಯಾಣಿಕರನ್ನು ನಿರ್ವಹಿಸಿದ ದಿನವಾಗಿದೆ.

ವಾಸ್ತವದಲ್ಲಿ ವಿಮಾನ ನಿಲ್ದಾಣವು 2024-25ರಲ್ಲಿ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 3.09 ಲಕ್ಷ ಹೆಚ್ಚಿನ ಪ್ರಯಾಣಿಕರನ್ನು ನಿರ್ವಹಿಸಿದೆ. ವಿಮಾನ ನಿಲ್ದಾಣವು 2024- 25 ನೇ ಹಣಕಾಸು ವರ್ಷದಲ್ಲಿ 3,864.1 ಮೆಟ್ರಿಕ್ ಟನ್ ದೇಶೀಯ ಸರಕುಗಳನ್ನು ನಿರ್ವಹಿಸಿದೆ. 2023-24 ನೇ ಹಣಕಾಸು ವರ್ಷದಲ್ಲಿ 3,706.02 ಮೆ.ಟ. ಸರಕು ನಿರ್ವಹಿಸಿತ್ತು. ಇಂಟಿಗ್ರೇಟೆಡ್ ಕಾರ್ಗೋ ಟರ್ಮಿನಲ್ನಲ್ಲಿ ದೇಶೀಯ ಸರಕು ಕಾರ್ಯಾಚರಣೆಗಳು 2023,
ಮೇ 1ರಂದು ಪ್ರಾರಂಭವಾಯಿತು. ಅದೇ ರೀತಿ ಅಂತರರಾಷ್ಟ್ರೀಯವಾಗಿ ವಿಮಾನ ನಿಲ್ದಾಣವು ಜುಲೈ 2024 ರಿಂದ ಸರಕು ಕಾರ್ಯಾಚರಣೆ ಪ್ರಾರಂಭಿಸಿತು ಮತ್ತು 1,346.27 ಟನ್ ಹೊರಹೋಗುವ ಮತ್ತು 0.79 ಮೆ.ಟ. ಒಳಬರುವ ಸರಕುಗಳನ್ನು ಒಳಗೊಂಡಂತೆ 134707 ಮೆ.ಟ. ಸರಕುಗಳನ್ನು ನಿರ್ವಹಿಸಿತು. ಇದರಲ್ಲಿ 2025, ಮಾರ್ಚ್ 31 ತನಕ 1,346 27 ಟನ್ ಹೊರಹೋಗುವ ಮತ್ತು 0.79 ಮೆ.ಟ ಒಳಬರುವ ಸರಕು ಸೇರಿದೆ.

