ಮಂಗಳೂರು: ಸಿಂಗಾಪುರದ ಹಡಗಿನಲ್ಲಿ ಭಾರೀ ಅಗ್ನಿ ಅನಾಹುತದಲ್ಲಿ ನಾಪತ್ತೆಯಾದ ನಾಲ್ವರಿಗಾಗಿ ಶೋಧ ಮುಂದುವರಿದಿದೆ. ತೈವಾನ್ ನ ಸೆಕೆಂಡ್ ಇಂಜಿನಿಯರ್ ಯು ಬೊ ಫಾಂಗ್. ಮ್ಯಾನ್ಮರ್ ನ ಕಾರ್ಪೆಂಟರ್ ಸಾನ್ ವಿನ್. ಇಂಡೋನೇಶ್ಯಾದ ಎಬಿ ಜಾನಲ್ ಅಹಿದಿನ್. ತೈವಾನ್ ನ ಮೋಟರ್ ಮ್ಯಾನ್ ಸಿಹ್ ಚಾಯ್ ವೆನ್ ನಾಪತ್ತೆಯಾಗಿದ್ದಾರೆ.
ಚೀನಾ ಮೂಲದ ನಂ 1 ಆಯ್ಲಿರ್ ಲೂಯನ್ಲಿ ಮತ್ತು ಇಂಡೋನೇಷ್ಯಾದ ಫಿಟ್ಟರ್ ಸೋನಿಟೂರ್ ಹೆನಿ ಗೆ ಗಂಭೀರ ಗಾಯವಾಗಿದೆ. ಚೈನಾದ ಸೆಕೆಂಡ್ ಫಿಟ್ಟರ್ ಗಳಾದ ಕ್ಸೂ ಪಬೋ, ಗೋ ಲಿನಿಂಗ್, ಮ್ಯಾನ್ಮರ್ ನ ಎಬಿ ಗಳಾದ ಥೆನ್ ಥಾನ್ ತ್ವಾಯ್, ಕಿ ಜಾವ್ ತ್ವೂ ಗೆ ಗಾಯವಾಗಿದೆ. 12 ಜನ ಸಿಬ್ಬಂದಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

