ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹೆಸರು ಬದಲಿಸಲು ಜೋರಾದ ಕೂಗು ಕೇಳಿದ್ದು, ಜಿಲ್ಲೆಯ ಹೆಸರು ಬದಲಾವಣೆಗೆ ಕಾಂಗ್ರೆಸ್ ,ಬಿಜೆಪಿ ,ಜೆಡಿಎಸ್ ಒಂದಾಗಿದೆ. ಒಂದೇ ವೇದಿಕೆಯಲ್ಲಿ ಕಾಂಗ್ರೆಸ್ , ಬಿಜೆಪಿ , ಜೆಡಿಎಸ್ ನಾಯಕರು ಸೇರಿಕೊಂಡಿದ್ದಾರೆ.
ದಕ್ಷಿಣ ಕನ್ನಡವನ್ನ ಮಂಗಳೂರು ಎಂದು ಬದಲಿಸಲು ಪಣ ತೊಟ್ಟಿದ್ದಾರೆ. ದಯಾನಂದ ಕತ್ತಾಲ್ ಸಾರ್, ಕಾಂಗ್ರೆಸ್ ಮುಖಂಡ ರಕ್ಷಿತ್ ಶಿವರಾಂ, ಬಿಜೆಪಿ ಮುಖಂಡ ಕಿರಣ್ ಕೋಡಿಕಲ್, ಜೆ ಡಿ ಎಸ್ ಮುಖಂಡ ಅಕ್ಷಿತ್ ಸುವರ್ಣ, ಮಾಜಿ ಶಾಸಕ ಮೊಯಿದ್ದೀನ್ ಬಾವಾ ಭಾಗಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಬದಲಿಸಲು ಆಗ್ರಹಿಸಲಾಗಿದೆ. ತುಳುಪರ ಸಂಘಟನೆಗಳಿಂದ ದ. ಕ ಜಿಲ್ಲೆಯ ಮರುನಾಮಕರಣಕ್ಕೆ ಬೃಹತ್ ಅಭಿಯಾನ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ತೀವ್ರಗೊಂಡ ಬೆನ್ನಲ್ಲೇ ಹೋರಾಟ ಸಮಿತಿ ರಚನೆಯಾಗಿದೆ.
ಮಂಗಳೂರು ಜಿಲ್ಲೆ ತುಳು ಪರ ಹೋರಾಟ ಸಮಿತಿ ರಚನೆಯಾಗಿದೆ. ಪಕ್ಷ ಧರ್ಮ ಭೇಧ ಮೀರಿ ಹೋರಾಟಕ್ಕೆ ವಿವಿಧ ರಾಜಕೀಯ ಹಾಗು ಧಾರ್ಮಿಕ ಮುಖಂಡರ ಸಾಥ್ ನೀಡಿದ್ದಾರೆ. 600 ಜನರನ್ನೊಳಗೊಂಡ ಗೂಗಲ್ ಮೀಟ್ ನಲ್ಲಿ ಮಂಗಳೂರು ಜಿಲ್ಲೆ ಎಂಬ ಮರುನಾಮಕರಣಕ್ಕೆ ನಿರ್ಧಾರ ಮಾಡಲಾಗಿದೆ.
ಜಿಲ್ಲೆಯ ವಿವಿಧ ತುಳು ಸಾಹಿತಿಗಳು, ಜಾನಪದ ವಿದ್ವಾಂಸರು, ಧಾರ್ಮಿಕ ಮುಖಂಡರುನಲ್ಲಿ ಭಾಗಿಯಾಗಿದ್ದಾರೆ. ರಾಜಧಾನಿಯಲ್ಲಿ ಜಿಲ್ಲೆಯ ಮರುನಾಮಕರಣದ ಕೂಗು ಪ್ರತಿಧ್ವನಿಸುವಂತೆ ಮಾಡಲು ತಯಾರಿನಡೆಸಲಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿಂದು ರಕ್ಷಿತ್ ಶಿವರಾಂ ತಿಳಿಸಿದ್ದಾರೆ.

