ಮಂಗಳೂರು: ಶನಿವಾರ ರಾತ್ರಿ ಗುಡುಗು ಸಿಡಿಲು ಸಹಿತ ಮಳೆಯಾಗಿದ್ದು, ಸುರತ್ಕಲ್‌ ನ ಮಧ್ಯ ಗ್ರಾಮದ ಮಾಧವ ನಗರದ ಬೇಬಿ ಎಂಬವರ‌ ಮನೆಗೆ ಸಿಡಿಲು ಬಡಿದು ಇಬ್ಬರು ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ವರದಿಯಾಗಿದೆ.

ಗಾಯಗೊಂಡವರನ್ನು ಲಾವಣ್ಯ (19)ಹಾಗೂ ಸೌಜನ್ಯ(16) ಎಂದು ಗುರುತಿಸಲಾಗಿದೆ. ಈ ವೇಳೆ ಮನೆಯಲ್ಲಿ ಐದು ಮಂದಿ ಸದಸ್ಯರಿದ್ದರು, ಈ ಪೈಕಿ ಲಾವಣ್ಯ ಮತ್ತು ಸೌಜನ್ಯ ಅವರಿಗೆ ಸಣ್ಣಪುಟ್ಟಗಾಯಗಳಾಗಿದ್ದು ‌ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ‌ ಎಂದು ತಿಳಿದು ಬಂದಿದೆ.‌ ಘಟನೆಯಿಂದ ಮನೆಯ ಗೋಡೆ, ನೆಲಕ್ಕೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.