ಮಂಗಳೂರು: ಅರುಣ್ ಕುಮಾರ್ ಪುತ್ತಿಲ ಸೇರಿ 36 ಜನರ ವಿರುದ್ಧ ಗಡಿಪಾರು ಕಾನೂನು ಪ್ರಕ್ರಿಯೆ ವಿಚಾರವಾಗಿ ‘ತಾಕತ್ತಿದ್ರೆ ಗಡಿಪಾರು ಮಾಡಿ ನೋಡಿ, ಒಮ್ಮೆ ಪುತ್ತಿಲರ ವಿಷಯಕ್ಕೆ ಬನ್ನಿʼ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಗಳು ಸತ್ತಿದ್ದಾರಾ ಬದುಕಿದ್ದಾರಾ ನೋಡೊಣ ಎಂದು ಸರ್ಕಾರ ಮತ್ತು ಪೊಲೀಸರಿಗೆ ಯುವಕ ಸವಾಲು ಹಾಕಿದ್ದಾರೆ.

ಸೆಲ್ಫಿ ವಿಡಿಯೋ ಮಾಡಿ ಯುವಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವ ಕಾರಣಕ್ಕೆ ಗಡಿಪಾರು ಮಾಡುತ್ತಿದ್ದೀರ ಹೇಳಿ. ಹಿಂದು ಸಾಮಾಜ ಯಾವ ಅನ್ಯಾಯ ಮಾಡಿದೆ ಹೇಳಿ, ಅಮೇಲೆ ನೋಟೀಸ್ ಕೊಡಿ. ನಾವು ಬಿಡೋ ಪ್ರಶ್ನೆಯೇ ಇಲ್ಲ. ಇನ್ನು ಮುಂದೆ ಕೂಡ 24 ಗಂಟೆಗಳ ಕಾಲ ಹಿಂದುತ್ವಕ್ಕೆ ದುಡಿಯುತ್ತೇವೆ. ನಿಮ್ಮ ತಾಕತ್ತನ್ನು ಒಳ್ಳೆಯದಕ್ಕೆ ತೋರಿಸಿ. ಕರಾವಳಿಯ ಕೋಮುಗಲಭೆ ನಿಲ್ಲಿಸಲು ಅದನ್ನು ಬಳಸಿ ಎಂದರು.