ಮಂಗಳೂರು: ಆರ್ ಎಸ್ ಎಸ್ ಪ್ರಪಂಚದ ನಂಬರ್ ಒನ್ ದೇಶಭಕ್ತ ಸಂಘಟನೆ. ಸಚಿವ ಪ್ರೀಯಾಂಕ ಖರ್ಗೆ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಆರ್ ಎಸ್ ಎಸ್ ಬಗ್ಗೆ ಅಜ್ಞಾನದ ಅಂಧಕಾರದಿಂದ ಪದಬಳಕೆ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ರವಿಕುಮಾರ್ ಸುದ್ದಿಗೋಷ್ಠಿ ನಡೆಸಿದರು.
ಆರ್ ಎಸ್ ಎಸ್ ನಿತ್ಯ ಸೇವಾ ಚಟುವಟಿಕೆಗಳನ್ನು ನಡೆಸುತ್ತದೆ. ಆರ್ ಎಸ್ ಎಸ್ ದೇಶಾದ್ಯಂತ ಪ್ರತಿನಿತ್ಯ ಸಾವಿರಾರು ಶಾಖೆಗಳನ್ನು ನಡೆಸುತ್ತದೆ. ಇದರ ಬಗ್ಗೆ ಅರಿವೇ ಇಲ್ಲದ ಮಾತನಾಡುವ ಪ್ರೀಯಾಂಕ ಖರ್ಗೆ ಅಜ್ಞಾನಿ, ಅಹಂಕಾರಿ. ದೇಶಕ್ಕೆ ಎರಡು ಶ್ರೇಷ್ಠ ಪ್ರಧಾನಿಗಳನ್ನು ನೀಡಿರೋದು ಆರ್ ಎಸ್ ಎಸ್ ಎಂದರು.
ಪ್ರೀಯಾಂಕ ಖರ್ಗೆಗೆ ಅಹಂಕಾರದ ಅಮಲು ನೆತ್ತಿಗೇರಿದೆ. ಸರ್ಕಾರಕ್ಕೆ ಧೈರ್ಯ ಇದ್ದರೆ ಎಸ್ ಡಿ ಪಿ ಐ ಬಗ್ಗೆ ಕ್ರಮ ಕೈಗೊಳ್ಳಲಿ. ಮೈ ಬ್ರದರ್ಸ್ ಅಂತಾ ಹೇಳುವ ಸರ್ಕಾರಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ಇದ್ಯಾ?, ಶಿವಮೊಗ್ಗ, ಮಂಗಳೂರು, ಕೋಲಾರ,ಗುಲ್ಬರ್ಗಾ ದಲ್ಲಿ ದಾಂಧಲೆ ಮಾಡಿದವರ ವಿರುಧ್ಧ ಕ್ರಮ ಕೈಗೊಳ್ಳಲಿ ಎಂದರು.
ಆರ್ ಎಸ್ ಎಸ್ ಸ್ವಯಂಸೇವಕರು ದಂಡ ಹಿಡಿದು ಪಥಸಂಚಲನ ಮಾಡಿದ್ರೆ ಭಯ ಆಗುತ್ತಾ?, ನಮ್ಮ ರಕ್ಷಣೆಯನ್ನು ನಾವೇ ಮಾಡಬೇಕು ಅಂತಾ ಹೇಳೋದು ಆರ್ ಎಸ್ ಎಸ್. ಜೈಲಿನಲ್ಲಿರುವ ಭಯೋತ್ಪಾದಕರಿಗೆ ಬಿರಿಯಾನಿ ಹಂಚಿರೋದು ಕಾಂಗ್ರೆಸ್ ಎಂದು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಮುಖಂಡ ರವಿಕುಮಾರ್ ಹೇಳಿಕೆ ನೀಡಿದರು.
ನೆಹರೂ ದೆಹಲಿಯ ಗಣರಾಜ್ಯೋತ್ಸವ ಪರೇಡ್ ನಲ್ಲೇ ಪಥಸಂಚಲನ ಕ್ಕೆ ಅವಕಾಶ ಮಾಡೊಕೊಟ್ರು, ನೆಹರೂ, ಇಂದಿರಾ ಗಾಂಧಿ ಆರ್ ಎಸ್ ಎಸ್ ಬಗ್ಗೆ ಏನು ಮಾತಾಡಿದ್ರು ಮೊದಲು ತಿಳಿದುಕೊಳ್ಳಿ, ಶಾಖೆಗೆ ಭೇಟಿ ನೀಡಿದ ಗಾಂಧೀಜಿ ಮತ್ತು ಅಂಬೇಡ್ಕರ್ ಆರ್ ಎಸ್ ಎಸ್ ಬಗ್ಗೆ ಅಧ್ಯಯನ ಮಾಡಿದ್ದರು. ಆರ್ ಎಸ್ ಎಸ್ ಬಗ್ಗೆ ಮಾತನಾಡೋಕೆ ಪ್ರೀಯಾಂಕ ಖರ್ಗೆ ಯಾವೂರ ದೊಣ್ಣೆ ನಾಯಕ. ಆರ್ ಎಸ್ ಎಸ್ ಬಗ್ಗೆ ತಿಳಿದುಕೊಂಡು ಮಾತನಾಡಿ ಎಂದು ಮಂಗಳೂರಿನಲ್ಲಿ ಬಿಜೆಪಿ ಮುಖಂಡ ರವಿಕುಮಾರ್ ವಾಗ್ದಾಳಿ ನಡೆಸಿದರು.

