ಮಂಗಳೂರು : ಎಬಿವಿಪಿ ವಿದ್ಯಾರ್ಥಿಗಳು ಮನವಿ ಸಲ್ಲಿಸಲು ಬರುವುದಾಗಿ ಮೊದಲೇ ತಿಳಿಸಿದ್ದರು. ಕಾನೂನುಬದ್ಧ ಸಂಘಟನೆಯಾದ ಎಬಿವಿಪಿಯ ಐದಾರು ಮಂದಿ ವಿದ್ಯಾರ್ಥಿಗಳು ಮನವಿ ನೀಡಲು ತೆರಳಿದ್ದರೇ ಹೊರತು ಪ್ರತಿಭಟನೆ ನಡೆಸಲು ಹೋಗಿರಲಿಲ್ಲ.

ಆದರೆ, ಮನವಿ ಸಲ್ಲಿಸಿ ಹಿಂದಿರುಗುವ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆಗೆ ಕುಳಿತಿದ್ದರು. ಮನವಿ ಸಲ್ಲಿಸುವ ಮೊದಲೇ ಪೊಲೀಸರು ವಿದ್ಯಾರ್ಥಿಗಳನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.

ವಿದ್ಯಾರ್ಥಿನಿಯರ ಮೇಲೆ ಕೈಮಾಡಿರುವುದು ತಪ್ಪು. ಈ ವಿಚಾರದಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಟೀಕಿಸಿದರು. ದೆಹಲಿಯ ವಿಚಾರವಾಗಿ ಮಾತನಾಡುವ ಕಾಂಗ್ರೆಸ್, ಕರ್ನಾಟಕ ಮತ್ತು ಕೇರಳದಲ್ಲಿ ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸುವ ಕೆಲಸ ಮಾಡುತ್ತಿದೆ.

ಶಿಕ್ಷಣ ಸಂಸ್ಥೆಗಳ ಬಳಿ ಉತ್ತರ ಕೇಳಲು ಸಾಧ್ಯವಾಗದಿದ್ದರೆ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕು. ವಿದ್ಯಾರ್ಥಿಗಳಿಂದ ಬಾಂಡ್ ಪತ್ರಕ್ಕೆ ಸಹಿ ಪಡೆದು ಅವರನ್ನು ನಿಯಂತ್ರಿಸುವ ಪ್ರಯತ್ನದ ಹಿಂದಿನ ಉದ್ದೇಶವೇನು? ನಾವು ಪ್ರಶ್ನಿಸಿದ ಬಳಿಕ ಬಾಂಡ್ ಪಡೆಯುವ ಕ್ರಮ ಕೈಬಿಡಲಾಗಿದೆ. ವಿದ್ಯಾರ್ಥಿಗಳ ಮೇಲೆ ಕೈಮಾಡಿದ ಬಳಿಕ ಬಾಂಡ್ ಪಡೆಯುವುದರಲ್ಲಿ ಏನು ಅರ್ಥವಿದೆ ಎಂದು ಪ್ರಶ್ನಿಸಿದರು.