ಮಂಗಳೂರು : ವಾಮಂಜೂರು ಕೆತ್ತಿಕಲ್‌ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಬೃಹತ್ ಬಂಡೆಗಳು ರಸ್ತೆಗೆ ಉರುಳಿದ ಭಯಾನಕ ವಿಡಿಯೋ ಸೆರೆಯಾಗಿದೆ.

ಬೈಕ್ ಸವಾರರು ಜೀವವನ್ನು ಪಣಕ್ಕೆ ಇಟ್ಟು ಸಾಗುವ ಪರಿಸ್ಥಿತಿ ಎದುರಾಗಿದೆ. ಮಂಗಳವಾರವೂ ಭೂಕುಸಿತ ಸಂಭವಿಸಿದ್ದು ಇಂದು ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ.