ನವದೆಹಲಿ: ರಾತ್ರಿ ನವದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಬಿಜೆಪಿ ನಾಯಕ ಲಾಲ್ ಕೃಷ್ಣ ಅಡ್ವಾಣಿ (ಎಲ್​ಕೆ ಅಡ್ವಾಣಿ) ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಎಲ್​ಕೆ ಅಡ್ವಾಣಿ ಅವರ ಆರೋಗ್ಯ ಇದೀಗ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

96 ವರ್ಷದ ಮಾಜಿ ಉಪಪ್ರಧಾನಿ ಎಲ್​ಕೆ ಅಡ್ವಾಣಿ ಅವರನ್ನು ಬುಧವಾರ ರಾತ್ರಿ 10.30ರ ಸುಮಾರಿಗೆ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್​)ನ ಖಾಸಗಿ ವಾರ್ಡ್‌ಗೆ ದಾಖಲಿಸಲಾಗಿತ್ತು. “ಎಲ್ ಕೆ ಅಡ್ವಾಣಿ ಅವರು ಸ್ಥಿರವಾಗಿದ್ದಾರೆ. ಮೂತ್ರಶಾಸ್ತ್ರ, ಹೃದ್ರೋಗ ಮತ್ತು ಜೆರಿಯಾಟ್ರಿಕ್ ಮೆಡಿಸಿನ್ ಸೇರಿದಂತೆ ವಿವಿಧ ವಿಶೇಷತೆಗಳ ವೈದ್ಯರ ತಂಡವು ಅವರನ್ನು ಮೌಲ್ಯಮಾಪನ ಮಾಡುತ್ತಿದೆ” ಎಂದು ಮೂಲಗಳು ತಿಳಿಸಿತ್ತು.

— ANI (@ANI) June 27, 2024