ಮಂಗಳೂರು: ನಗರದಲ್ಲಿ 13F ರೂಟ್ ನಂಬರ್ ಕೃಷ್ಣ ಪ್ರಸಾದ್ ಬಸ್ಸು ಎಂದಿನಂತೆ ಕುಳೂರು ಮಾರ್ಗವಾಗಿ ಚಲಿಸುತಿತ್ತು. ಅದರಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರೊಬ್ಬರಲ್ಲಿ ಕಾಲೇಜು ವಿದ್ಯಾರ್ಥಿಗೆ ತಟ್ಟನೆ ಎದೆ ನೋವು ಕಾಣಿಸಿಕೊಂಡಿದೆ.
ತಕ್ಷಣ ಎಚ್ಚೆತ್ತುಗೊಂಡ ಬಸ್ಸಿನ ಚಾಲಕ ನಿರ್ವಾಹಕರಾದ ಗಜೇಂದ್ರ ಕುಂದರ್ ಹಾಗು ಮಹೇಶ್ ಪೂಜಾರಿ ಸುರೇಶ್ ಬಸ್ಸನ್ನು ನೇರವಾಗಿ ಕಂಕನಾಡಿ ಆಸ್ಪತ್ರೆಯತ್ತ ತಿರುಗಿಸಿದ್ದಾರೆ.
ಆಂಬುಲೆನ್ಸ್ ಮಾದರಿಯಲ್ಲಿ ಸೈರಾನ್ ಹಾಕಿಕೊಂಡು 6 km ದೂರವನ್ನು 6ನಿಮಿಷಗಳಲ್ಲಿ ಪ್ರಯಾಣಿಸಿ/ಕ್ರಮಿಸಿ ನಗರದ ಕಂಕನಾಡಿ ಆಸ್ಪತ್ರೆಗೆ ಧಾವಿಸಿ ವಿದ್ಯಾರ್ಥಿಯನ್ನು ಸೇರಿಸಿ ಜೀವ ಉಳಿಸಿದ್ದಾರೆ. ಈ ಕೆಲಸ ನೋಡುತ್ತಿದ್ದ ಸಾರ್ವಜನಿಕರನ್ನು ಮೂಕ ವಿಸ್ಮಯರನ್ನಾಗಿಸಿದೆ ಹಾಗು ಚಾಲಕ ನಿರ್ವಾಹಕರ ನಡೆಗೆ ಪ್ರಶಂಷೆಗೆ ಪಾತ್ರ ವಾಗಿದೆ
ಈ ಮೂಲಕ ಕರಾವಳಿಯಲ್ಲಿ ಬಸ್ಸು ಚಾಲಕ ನಿರ್ವಹಕ ಶ್ರಮಿಕ ವರ್ಗ ಮಾನವೀಯತೆ ಯ ಆಗರ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

