ಮಂಗಳೂರು : ಮಹಾನಗರಪಾಲಿಕೆ ವ್ಯಾಪ್ತಿಯ ಕೆ.ಪಿ.ಟಿ.ಯಿಂದ ಏರ್ಪೋರ್ಟ್ ಬೀದಿಬದಿ ವ್ಯಾಪಾರಮುಕ್ತ ವಲಯ ಎಂದು ಈಗಾಗಲೇ ಘೋಷಿಸಲಾಗಿದೆ. ಆದುದರಿಂದ ಕೆ.ಪಿ.ಟಿಯಿಂದ ಏರ್ಪೋರ್ಟ್ ತನಕದ ರಸ್ತೆಯ ಎರಡೂ ಬದಿಯ ಫುಟ್ಪಾತ್ಗಳಲ್ಲಿ ಯಾವುದೇ ಬೀದಿಬದಿ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದೆ.
ಒಂದು ವೇಳೆ ಯಾರಾದರೂ ರಸ್ತೆಯ ಇಕ್ಕೆಲಗಳಲ್ಲಿ ಬೀದಿಬದಿ ವ್ಯಾಪಾರ ಮಾಡುವುದು ಕಂಡುಬಂದರೆ ಮಂಗಳೂರು ಮಹಾನಗರಪಾಲಿಕೆ ವತಿಯಿಂದ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದೆಂದು ಮಹಾನಗರಪಾಲಿಕೆ ಕದ್ರಿ ವಲಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

