ಮಂಗಳೂರು: ತೀವ್ರ ಎದೆನೋವಿನಿಂದ ಬಳಲುತ್ತಿದ್ದ 60 ವರ್ಷದ ಹಿರಿಯ ಮಹಿಳೆ ಶ್ರೀಮತಿ ಶೆಟ್ಟಿ (ಹೆಸರು ಬದಲಾಯಿಸಲಾಗಿದೆ) ಅವರನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕರೆತರಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ಹಿರಿಯ ಇಂಟರ್‌ವೆನ್ಷನಲ್‌ ಹೃದಯತಜ್ಞರಾದ ಡಾ. ಎಂ.ಎನ್. ಭಟ್ ಅವರು ಸಮಗ್ರ ಪರೀಕ್ಷೆ ಮತ್ತು ಇಸಿಜಿ ನಂತರ ತೀವ್ರ ಹೃದಯಾಘಾತ ಆಗಿರುವುದನ್ನು ಪತ್ತೆ ಮಾಡಿದರು.

ಹೃದಯದ ಸ್ನಾಯುಗಳಿಗೆ ರಕ್ತವನ್ನು ಪೂರೈಸುವ ಅಪಧಮನಿಗಳಲ್ಲಿ ಅಡಚಣೆ ಆಗಿರುವ ಸ್ಥಳ ಮತ್ತು ಅದರ ತೀವ್ರತೆಯನ್ನು ನಿರ್ಧರಿಸಲು ಪರಿಧಮನಿಯ ಆಂಜಿಯೋಗ್ರಫಿಯನ್ನು ನಡೆಸಲಾಯಿತು. ಆದರೆ, ಕಾರ್ಯವಿಧಾನದ ಸಮಯದಲ್ಲಿ, ಶ್ರೀಮತಿ ಶೆಟ್ಟಿ ಅವರ ಬಲಗೈಯಲ್ಲಿರುವ ರೇಡಿಯಲ್ ಅಪಧಮನಿಯು ಕಾರ್ಯವಿಧಾನವನ್ನು ನಿರ್ವಹಿಸಲು ತುಂಬಾ ಚಿಕ್ಕದಾಗಿರುವುದು ಕಂಡುಬಂದಿತು.

ಇದಕ್ಕೆ ಪರ್ಯಾಯವೆಂದರೆ ಅವರ ಕಾಲುಗಳಲ್ಲಿನ ಅಪಧಮನಿಗಳನ್ನು ಬಳಸುವುದು. ಆದರೆ, ಇದರಿಂದ ರೋಗಿಗೆ ರಕ್ತಸ್ರಾವ ಮತ್ತು ಅಸ್ವಸ್ಥತೆಯ ಅಪಾಯ ಸಾಧ್ಯತೆ ಹೆಚ್ಚಾಗಿತ್ತು. ಇಂತಹ ಸಂದರ್ಭದಲ್ಲಿ ದಿಟ್ಟ ಮತ್ತು ನವೀನ ಹೆಜ್ಜೆಯನ್ನು ಇರಿಸಿದ ಡಾ. ಎಂ.ಎನ್. ಭಟ್ ಅವರು ರೋಗಿಯ ಬಲಗೈಯಲ್ಲಿರುವ ʻಉಲ್ನಾರ್ʼ ಅಪಧಮನಿಯನ್ನು ಬಳಸಲು ನಿರ್ಧರಿಸಿದರು, ಇದು ಕಾರ್ಯವಿಧಾನಕ್ಕೆ ಹೆಚ್ಚು ಸೂಕ್ತವಾಗಿದೆ ಎಂದು ಕಂಡುಕೊಂಡರು.

ʻಉಲ್ನಾರ್ʼ ಅಪಧಮನಿಯು ದೇಹದ ಆಳವಾದ ಸ್ಥಳದಲ್ಲಿರುವುದರಿಂದ ಎದುರಾಗಬಹುದಾದ ಸವಾಲುಗಳ ಹೊರತಾಗಿಯೂ, ಡಾ. ಎಂ.ಎನ್.ಭಟ್ ಮತ್ತು ಅವರ ತಂಡವು ರೋಗನಿರ್ಣಯಕ್ಕಾಗಿ ಆಂಜಿಯೋಗ್ರಾಮ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಇದು ಪ್ರಮುಖ ಅಪಧಮನಿಯಲ್ಲಿ ಶೇ. 100ರಷ್ಟು ತಡೆ ಇರುವುದನ್ನು ಬಹಿರಂಗಪಡಿಸಿತು, ಹೃದಯಾಘಾತವನ್ನು ದೃಢಪಡಿಸಿತು. ಈ ಹೊತ್ತಿಗೆ, ರೋಗಿಯ ರಕ್ತದೊತ್ತಡವು ಕುಸಿದಿತ್ತು, ಆದರೆ, ʻಐವಿʼ ಔಷಧಗಳನ್ನು ಬಳಸಿಕೊಂಡು ಇದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಯಿತು.

 

ಡಾ. ಎಂ.ಎನ್.ಭಟ್, ಗಣೇಶ್ ಮತ್ತು ತಂಡದವರು ತುರ್ತು ಆಂಜಿಯೋಪ್ಲಾಸ್ಟಿ ಮತ್ತು ಸ್ಟೆಂಟಿಂಗ್ ಕಾರ್ಯವಿಧಾನವನ್ನು ಅನುಸರಿಸಿದರು. ಗಮನಾರ್ಹ ವಿಷಯವೆಂದರೆ, ಶ್ರೀಮತಿ ಶೆಟ್ಟಿ ಅವರು ಯಾವುದೇ ತೊಡಕುಗಳಿಲ್ಲದೆ ಸಂಪೂರ್ಣವಾಗಿ ಚೇತರಿಸಿಕೊಂಡರು ಮತ್ತು ಕಾರ್ಯವಿಧಾನದ ಒಂದು ದಿನದ ನಂತರ ಅವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಯಿತು.

ಈ ಕಾರ್ಯವಿಧಾನದ ಬಗ್ಗೆ ವಿವರಿಸಿದ ಡಾ. ಎಂ.ಎನ್.ಭಟ್ ಅವರು “ರೇಡಿಯಲ್ ಅಪಧಮನಿ ತುಂಬಾ ಚಿಕ್ಕದಾಗಿದ್ದಾಗ, ಉಲ್ನಾರ್ ಅಪಧಮನಿಯನ್ನು ಆಂಜಿಯೋಗ್ರಫಿ ಅಥವಾ ಸ್ಟೆಂಟಿಂಗ್‌ಗೆ ಬಳಸಬಹುದು. ಆದಾಗ್ಯೂ, ರೇಡಿಯಲ್ ಅಪಧಮನಿಗೆ ಹೋಲಿಸಿದರೆ ʻಉಲ್ನಾರ್ʼ ಅಪಧಮನಿಯು ಮುಂಗೈಯಲ್ಲಿ ಆಳವಾದ ಸ್ಥಳದಲ್ಲಿ ನೆಲೆಗೊಂಡಿರುವುದರಿಂದ ಇದಕ್ಕೆ ಹೆಚ್ಚಿನ ಪರಿಣತಿಯ ಅಗತ್ಯವಿರುತ್ತದೆ. ಕಾರ್ಯವಿಧಾನದ ಸಮಯದಲ್ಲಿ ʻಉಲ್ನಾರ್ʼ ನರಕ್ಕೆ ಗಾಯವಾಗದಂತೆ ಎಚ್ಚರಿಕೆ ವಹಿಸಬೇಕು. ಈ ಕಾರ್ಯವಿಧಾನವು ತಾಂತ್ರಿಕವಾಗಿ ಹೆಚ್ಚು ಸವಾಲಿನದ್ದಾಗಿದ್ದರೂ, ರೋಗಿಗೆ ನೋವಿನ ಪ್ರಮಾಣ ಮತ್ತು ರಕ್ತಸ್ರಾವದ ಅಪಾಯ ಕಡಿಮೆ ಇರುತ್ತದೆ. ಜೊತೆಗೆ, ಐಸಿಯು ವಾಸ್ತವ್ಯದ ಸಮಯವೂ ಕಡಿಮೆ ಇರುತ್ತದೆ.

ಶ್ರೀಮತಿ ಶೆಟ್ಟಿ ಅವರ ಯಶಸ್ವಿ ಚಿಕಿತ್ಸೆಯು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪರಿಣತಿ ಮತ್ತು ನಾವೀನ್ಯತೆಯನ್ನು ಒತ್ತಿಹೇಳುತ್ತದೆ. ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಅವರು ಈ ಬಗ್ಗೆ ಮಾತನಾಡಿ, ”ನಮ್ಮ ವೈದ್ಯಕೀಯ ತಂಡದ ಸಮರ್ಪಣೆ ಮತ್ತು ಕೌಶಲ್ಯದ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ. ಈ ಪ್ರಕರಣವು ನಮ್ಮ ರೋಗಿಗಳಿಗೆ ಸಾಧ್ಯವಾದಷ್ಟು ಉತ್ತಮ ಆರೈಕೆಯನ್ನು ಒದಗಿಸಲು ನಾವು ಬಳಸುವ ಸುಧಾರಿತ ತಂತ್ರಗಳನ್ನು ಎತ್ತಿ ತೋರುತ್ತದೆ. ಶ್ರೀಮತಿ ಶೆಟ್ಟಿ ಅವರ ಯಶಸ್ವಿ ಚಿಕಿತ್ಸೆಯು ಕೆಎಂಸಿ ಆಸ್ಪತ್ರೆಯಲ್ಲಿ ಲಭ್ಯವಿರುವ ವಿಶ್ವದರ್ಜೆಯ ವೈದ್ಯಕೀಯ ಪರಿಣತಿಗೆ ಸಾಕ್ಷಿಯಾಗಿದೆ,” ಎಂದು ಹೇಳಿದರು.

ಡಾ. ಎಂ.ಎನ್.ಭಟ್ ಮತ್ತು ಅವರ ತಂಡದ ತ್ವರಿತ ಮಧ್ಯಸ್ಥಿಕೆಗೆ ರೋಗಿಯ ಕುಟುಂಬವು ಕೃತಜ್ಞತೆ ವ್ಯಕ್ತಪಡಿಸಿತು. “ಶ್ರೀಮತಿ ಶೆಟ್ಟಿ ಅವರು ಪಡೆದ ಆರೈಕೆಗೆ ನಾವು ನಿಜವಾಗಿಯೂ ಕೃತಜ್ಞರಾಗಿದ್ದೇವೆ. ಕೆಎಂಸಿ ಆಸ್ಪತ್ರೆಯ ತಂಡವು ಆಕೆಯ ಚೇತರಿಕೆಯನ್ನು ಖಚಿತಪಡಿಸಿಕೊಳ್ಳಲು ದಣಿವರಿಯದೆ ಕೆಲಸ ಮಾಡಿತು, ಮತ್ತು ಆಕೆಯ ಆರೋಗ್ಯ ಸ್ಥಿತಿ ಈಗ ಉತ್ತಮವಾಗಿರುವುದನ್ನು ನೋಡಿ ನಮಗೆ ಸಮಾಧಾನವಾಗಿದೆ,” ಎಂದು ರೋಗಿಯ ಕುಟುಂಬಸ್ಥರು ಹೇಳಿದರು.

ಈ ಯಶಸ್ವಿ ಪ್ರಕರಣವು ಸಂಕೀರ್ಣ ಹೃದಯ ಪರಿಸ್ಥಿತಿಗಳನ್ನು ನಿರ್ವಹಿಸುವಲ್ಲಿ ನವೀನ ತಂತ್ರಗಳು ಮತ್ತು ತಜ್ಞರ ಆರೈಕೆಯ ಮಹತ್ವವನ್ನು ಎತ್ತಿ ತೋರುತ್ತದೆ, ಈ ಪ್ರದೇಶದ ಅನೇಕ ರೋಗಿಗಳಿಗೆ ಹೊಸ ಭರವಸೆಯನ್ನು ನೀಡುತ್ತದೆ. ಚಿಕಿತ್ಸಾತ್ಮಕ ಉತ್ಕೃಷ್ಟತೆಯ ಜೊತೆಗೆ ಅನುಭವಿ ಸಹಾಯಕ ಸಿಬ್ಬಂದಿಯು ಆರೈಕೆಯ ಗುಣಮಟ್ಟವನ್ನು ಖಾತರಿಪಡಿಸುತ್ತಾರೆ.

ಆರೋಗ್ಯ ರಕ್ಷಣೆಯ ಪ್ರವರ್ತಕ ಸಂಸ್ಥೆಯಾಗಿರುವ, ʻಮಣಿಪಾಲ್ ಹಾಸ್ಪಿಟಲ್ಸ್‌ʼ, ವಾರ್ಷಿಕವಾಗಿ 7 ದಶಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಸೇವೆ ಸಲ್ಲಿಸುವ ಭಾರತದ ಅತ್ಯುನ್ನತ ಆರೋಗ್ಯ ಆರೈಕೆ ಪೂರೈಕೆದಾರರಲ್ಲಿ ಒಂದೆನಿಸಿದೆ. ಮಲ್ಟಿಸ್ಪೆಷಾಲಿಟಿ ಮತ್ತು ತೃತೀಯ ಶ್ರೇಣಿಯ ಆರೈಕೆ ಮೂಲಕ ಕೈಗೆಟುಕುವ, ಉತ್ತಮ ಗುಣಮಟ್ಟದ ಆರೋಗ್ಯಸೇವಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಆಸ್ಪತ್ರೆಯ ಹೊರಗಿನ ಆರೈಕೆಗೂ ಅದನ್ನು ವಿಸ್ತರಿಸುವುದರತ್ತ ಸಂಸ್ಥೆಯು ಗಮನ ಹರಿಸುತ್ತದೆ.

ʻಮೆಡಿಕಾ ಸೈನರ್ಜಿ ಹಾಸ್ಪಿಟಲ್ಸ್‌ʼ ಮತ್ತು ʻಎಎಂಆರ್‌ಐ ಹಾಸ್ಪಿಟಲ್ಸ್ ಲಿಮಿಟೆಡ್ʼ ಸ್ವಾಧೀನ ಪೂರ್ಣಗೊಂಡ ನಂತರ(2023ರ ಸೆಪ್ಟೆಂಬರ್‌ನಲ್ಲಿ ಸ್ವಾಧೀನ), ಮಣಿಪಾಲ್‌ ಹಾಸ್ಪಿಟಲ್ಸ್‌ನ ಸಂಯೋಜಿತ ಆಸ್ಪತ್ರೆಗಳ ಜಾಲವು ಇಂದು 19 ನಗರಗಳಲ್ಲಿ 10,500ಕ್ಕೂ ಹಾಸಿಗೆಗಳು, 5,600ಕ್ಕೂ ಹೆಚ್ಚು ಪ್ರತಿಭಾವಂತ ವೈದ್ಯರು ಮತ್ತು 18,600ಕ್ಕೂ ಹೆಚ್ಚು ಉದ್ಯೋಗಿಗಳ ಸಾಮರ್ಥ್ಯವನ್ನು ಹೊಂದಿರುವ 37 ಆಸ್ಪತ್ರೆಗಳ ಪ್ಯಾನ್- ಇಂಡಿಯಾ ಹೆಜ್ಜೆಗುರುತನ್ನು ಹೊಂದಿದೆ.
ಮಣಿಪಾಲ್ ಹಾಸ್ಪಿಟಲ್ಸ್‌ ಪ್ರಪಂಚದಾದ್ಯಂತ ವೈವಿಧ್ಯಮಯ ರೋಗಿಗಳಿಗೆ ಸಮಗ್ರ ರೋಗಶಮನ ಮತ್ತು ತಡೆಗಟ್ಟುವಿಕೆ ಸೇವೆಯನ್ನು ಒದಗಿಸುತ್ತವೆ.

ಮಣಿಪಾಲ್ ಹಾಸ್ಪಿಟಲ್ಸ್‌ ʻಎನ್ಎಬಿಎಚ್ʼ, ʻಎಎಎಚ್ಆರ್‌ಪಿಪಿʼ ಮಾನ್ಯತೆ ಪಡೆದಿದೆ ಮತ್ತು ಅದರ ಜಾಲದಲ್ಲಿರುವ ಹೆಚ್ಚಿನ ಆಸ್ಪತ್ರೆಗಳು ʻಎನ್ಎಬಿಎಲ್ʼ, ʻಇಆರ್ʼ, ʻಬ್ಲಡ್ ಬ್ಯಾಂಕ್ʼ ಮಾನ್ಯತೆ ಪಡೆದಿವೆ ಜೊತೆಗೆ, ನರ್ಸಿಂಗ್ ಉತ್ಕೃಷ್ಟತೆಗಾಗಿ ಗುರುತಿಸಲ್ಪಟ್ಟಿದೆ. ವಿವಿಧ ಗ್ರಾಹಕ ಸಮೀಕ್ಷೆಗಳಲ್ಲಿ ಭಾರತದ ಅತ್ಯಂತ ಗೌರವಾನ್ವಿತ ಮತ್ತು ರೋಗಿ ಶಿಫಾರಸು ಮಾಡಿದ ಆಸ್ಪತ್ರೆಯಾಗಿ ʻಮಣಿಪಾಲ್ ಹಾಸ್ಪಿಟಲ್ಸ್‌ʼ ಗುರುತಿಸಲ್ಪಟ್ಟಿದೆ.