ಪುತ್ತೂರು: ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಗಿ ಘೊಷಣೆಯಾದ ಮರುದಿನ ತವರೂರಾದ ಪುತ್ತೂರಿಗೆ ಬುಧವಾರ ಭೇಟಿ ನೀಡಿದ ಕಿಶೋರ್ ಬೊಟ್ಯಾಡಿ ಅವರು ದೇವಸ್ಥಾನಗಳಿಗೆ ಸರಣಿ ಭೇಟಿ ನೀಡಿದರು.ಬೆಳಗ್ಗೆ ಆರಂಭದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಅವರಿಗೆ ದೇವಳದ ಪ್ರಧಾನ ಅರ್ಚಕ ವಿ.ಎಸ್. ಭಟ್ ಅವರು ಪ್ರಸಾದ ನೀಡಿದರು.
ಇದಾದ ಬಳಿಕ ಶ್ರೀ ಲಕ್ಷಿವೆಂಕಟರಮಣ ದೇವಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಇದಾದ ಬಳಿಕ ಐತಿಹಾಸಿಕ ಗಾಂಧಿ ಕಟ್ಟೆಗೆ ತೆರಳಿ ಮಹಾತ್ಮ ಗಾಂಧೀಜಿ ಅವರ ಜಯಂತಿ ಹಿನ್ನೆಲೆಯಲ್ಲಿ ರಾಷ್ಟçಪಿತರ ಪ್ರತಿಮೆಗೆ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ತಮ್ಮ ತಂದೆಯವರಾದ ದಿ.ರಾಮಣ್ಣ ಭಂಡಾರಿ ಅವರು ಭಾರತೀಯ ಜನಸಂಘ ಮತ್ತು ಭಾರತೀಯ ಜನತಾ ಪಾರ್ಟಿಗೆ ಸಲ್ಲಿಸಿದ ಸೇವೆಯನ್ನು ಬಿಜೆಪಿಯ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಕಿಶೋರ್ ಬೊಟ್ಯಾಡಿ ಸ್ಮರಿಸಿದ್ದಾರೆ.
ಬುಧವಾರ ಪುತ್ತೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ನನ್ನ ತಂದೆಯವರು ಪಕ್ಷವನ್ನು ತಾಯಿ ಎಂದು ತಿಳಿದುಕೊಂಡು ಸೇವೆ ಸಲ್ಲಿಸಿದ್ದರು. ಕೇಂದ್ರದ ಮಾಜಿ ಸಚಿವರಾದ ಡಿ.ವಿ. ಸದಾನಂದ ಗೌಡರು ಮತ್ತು ನನ್ನ ತಂದೆಯವರು ಬಹಳ ಆತ್ಮೀಯರಾಗಿದ್ದರು. ನಿನ್ನೆ ನನಗೆ ಕರೆ ಮಾಡಿದ ಡಿ.ವಿ. ಸದಾನಂದ ಗೌಡರು, ನಿಮ್ಮ ತಂದೆಯವರು ಪಕ್ಷಕ್ಕೆ ಮಾಡಿದ ಸೇವೆಯನ್ನು ನೆನಪಿಸಿಕೊಳ್ಳಿ ಎಂದು ಮಾರ್ಗದರ್ಶನ ನೀಡಿದರು ಎಂದರು.
ಸ್ವAತಕ್ಕೆ ಸ್ವಲ್ಪö, ಸಮಾಜಕ್ಕೆ ಸರ್ವಸ್ವ ಎಂಬ ಹಿರಿಯರ ಸಿದ್ಧಾಂತವನ್ನೇ ನಾನು ಕೂಡ ಬಾಲ್ಯದಿಂದಲೇ ಪಾಲಿಸಿಕೊಂಡು ಬಂದಿದ್ದೇನೆ. ಇವತ್ತು ಪಕ್ಷದ ಎಲ್ಲ ನಾಯಕರು ಸೇರಿ ನನ್ನನ್ನು ಆರಿಸಿದ್ದಾರೆ. ಒಂದು ಸಣ್ಣ ಸಮುದಾಯಕ್ಕೆ ಸೇರಿದ ಕಾರ್ಯಕರ್ತನಾದ ನನಗೆ ಟಿಕೆಟ್ ನೀಡಿದ್ದಾರೆಂದರೆ ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ. ಗೆದ್ದು ಬಂದ ಮೇಲೆ ಎಲ್ಲ ಗ್ರಾಮ ಪಂಚಾಯಿತಿಗಳ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದರು.
ನಂತರ ಬಲ್ನಾಡ್ ಶ್ರೀ ದಂಡನಾಯಕ- ಉಳ್ಳಾಲ್ತಿ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಮಧ್ಯಾಹ್ನ ಪುತ್ತೂರು ಬಿಜೆಪಿ ಕಚೇರಿಗೆ ಆಗಮಿಸಿದಾಗ ಪಕ್ಷದ ಪರವಾಗಿ ಅಭ್ಯರ್ಥಿಯನ್ನು ಗೌರವ ಪೂರ್ವಕವಾಗಿ ಬರಮಾಡಿಕೊಂಡು ಅಭಿನಂದಿಸಲಾಯಿತು.
ಬಳಿಕ ಪುತ್ತೂರಿನ ಕೆಲವು ಸಂಘ ಪರಿವಾರ ನಾಯಕರು, ಪಕ್ಷದ ನಾಯಕರು, ಸಾಮಾಜಿಕ ಮುಖಂಡರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಅಪರಾಹ್ನ ತಮ್ಮ ಊರಾದ ಸರ್ವೆ ಗ್ರಾಮದ ಬೊಟ್ಯಾಡಿಗೆ ತೆರಳಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿದರು. ಈ ಸಂದರ್ಭ ಊರಿನ ಜನ ಕಿಶೋರ್ ಜತೆ ಸಂಭ್ರಮ ಹಂಚಿಕೊAಡರು.
ಮಾಜಿ ಶಾಸಕ ಸಂಜೀವ ಮಠಂದೂರು, ಪಕ್ಷದ ನಗರ ಮಂಡಲ ಅಧ್ಯಕ್ಷರಾದ ಶಿವಕುಮಾರ್ ಕಲ್ಲಿಮಾರ್. ಜಿಲ್ಲಾ ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ಮಾರ್ತ, ನಗರಸಭೆ ಉಪಾಧ್ಯಕ್ಷರಾದ ಬಾಲಚಂದ್ರ ಕೆಮ್ಮಿಂಜೆ, ಜಿಲ್ಲಾ ಕಾರ್ಯದರ್ಶಿ ವಿದ್ಯಾ ಗೌರಿ, ನಗರಸಭೆ ಸದಸ್ಯೆ ದೀಕ್ಷಾ ಪೈö, ಪ್ರಮುಖರಾದ ಚಂದ್ರಶೇಖರ್ ರಾವ್ ಬಪ್ಪಳಿಗೆ, ನಾಗೇಶ್ ಗೌಡ ಮತ್ತಿತರರು ಕಿಶೋರ್ ಅವರ ದೇವಳ ಪರ್ಯಟನೆ ಸಂದರ್ಭ ಉಪಸ್ಥಿತರಿದ್ದರು.

