ಮಂಗಳೂರು:   ಹಂಪನಕಟ್ಟೆ ಯ ಮಿಲಾಗ್ರಿ ಸ್ ಕಾಲೇಜಿನಲ್ಲಿ ಜುಲೈ 30, 2024 ರಂದು ಬೆಳಗ್ಗೆ 9.00 ರಿಂದ ಸಂಜೆ 3.00ರ ವರೆಗ್ಗ” ಉದ್ಯೋಗ  ಮೇಳ 2024″ ನ್ನು ಆಯೋಜಿಸಲಾಗುವುದು. ಯಾವುದೇ  ನೋಂದಣಿ ಶುಲ್ಕ ವಿಲ್ಲದೆ ಅಭ್ಯ ರ್ಥಿಗಳು ಭಾಗವಹಿಸಲು ಅವಕಾಶವಿದೆ  ಎಂದು ಪ್ರಾಂಶುಪಾಲರಾದ  ವಂ| ಡಾ| ಮೈಕೆಲ್,  ಸಾಂತುಮಯೋರ್‌ ರವರು ತಿಳಿಸಿದ್ದಾರೆ. ಅಜಿತ್  ಎಂಟರ್‌ಪ್ರೈಸಸ್‌ ಸಿ.ಐ.ಐ ಮಂಗಳೂರು ಮತ್ತು  ವ್ಯವಸ್ಥಾಪಕರು, ನಿರ್ದೇಶಕರು ಹಾಗೂ ಉಪಾಧ್ಯಕ್ಷರಾದ ಶ್ರೀಯುತ . ಅಜಿತ್ ಕಾಮತ್ “ಉದ್ಯೋಗ  ಮೇಳ 2024″ವನ್ನು ಉದ್ಘಾಟಿಸಲಿರುವ   ಕಾಲೇಜಿನ ಸಂಚಾಲ್ಕರಾದ ವಂ|ಫಾ| ಬೊನವಿಂಚರ್ ನಜರೆತ್ರವರು ಅಧ್ಯ ಕ್ಷತೆ ವಹಿಸಲಿದ್ದು, ಉದ್ಯೋಗ  ಮೇಳದಲ್ಲಿಸುಮಾರು 60 ಕಂಪ್ನಿಗಳು ಭಾಗವಹಿಸಲಿದ್ದೂ, 2,500ರಷ್ಟೆ ಉದ್ಯೋಗಾವಕಾಶವನ್ನು  ಒದಗಿಲಸಲಿವೆ.
ಪದವಿ, ಸ್ನಾತಕೋತ್ರರ ಪದವಿ, ಎಂಜಿನಿಯರಿಂಗ್, ಐಟಿಐ, ಡಿಪ್ಲೋಮಾ, ಹೊಟೇಲ್ ಮ್ಯಾನೇಜ್‌ಮೆಂಟ್‌  ಶಿಕ್ಷಣ  ಪಡೆದ ಅಭ್ಯ ರ್ಥಿಗಳು ಅಂತಿಮ ವರ್ಷದಲ್ಲಿ ವ್ಯಾಸಾಂಗ  ಮಾಡುತ್ತಿರುವ ವಿದ್ಯಾರ್ಥಿಗಳು ಉದ್ಯೋಗ   ಮೇಳದ ಪ್ರಯೋಜನ ಪಡೆದುಕೊಳ್ಳಬಹುದು . ಸ್ವ-ವಿವರದ ಪ್ರತಿಗಳು ,  ಸೂಕ್ತ ಧಾಖಲೆಗಳೊಂದಿಗೆ ಹಾಜರಾಗಬಹುದು ಎಂದು ತಿಳಿಸಿದ್ದಾರೆ.