ಮೈಸೂರು : ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಹಿನ್ನೆಲೆ ಮೈಸೂರಿನಿಂದ ಮಾಜಿ ಸಚಿವ ಸಾ.ರಾ.ನೇತೃತ್ವದಲ್ಲಿ ಜೆಡಿಎಸ್ ಧರ್ಮಯಾತ್ರೆ ನಡೆಸಿದರು.

ಮೈಸೂರಿನಿಂದ ಧರ್ಮಸ್ಥಳಕ್ಕೆ ಜೆಡಿಎಸ್ ಮುಖಂಡರು ಹೊರಟರು. ಮೈಸೂರು ಜಿಲ್ಲೆಯಿಂದ ಸುಮಾರು 300 ಕಾರುಗಳಲ್ಲಿ ಪ್ರಯಾಣ ನಡೆಸಿದ್ದಾರೆ. ಅನಗತ್ಯವಾಗಿ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವಿರುದ್ಧ ಅಪಪ್ರಚಾರ ತಪ್ಪಬೇಕು. ಅಪಪ್ರಚಾರದ ಹಿಂದೆ ಕಾಣದ ಕೈಗಳಿಗೆ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದರು.

ಸಾರಾ ಚೌಟ್ರಿಯಿಂದ ಯಾತ್ರೆಗೆ  ಮಾಜಿ ಸಚಿವ ಸಾರಾ ಮಹೇಶ್ ಚಾಲನೆ ನೀಡಿದರು. ಯಾತ್ರೆಯಲ್ಲಿ ಎಂಎಲ್ ಸಿ ಮಂಜೇಗೌಡ, ಮಾಜಿ ಶಾಸಕ ಕೆ ಮಹದೇವ್, ಮುಖಂಡ ಅಮಿತ್ ದೇವರ ಹಟ್ಟಿ ಸೇರಿದಂತೆ ನೂರಾರು ಮುಖಂಡರು ಉಪಸ್ಥಿತಿ ಇದ್ದರು.

ಮೈಸೂರು, ಇಲವಾಲ, ಕೆಆರ್.ನಗರ, ಅರದನಹಳ್ಳಿ ಮಾರ್ಗವಾಗಿ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು  ಜೆಡಿಎಸ್ ಯಾತ್ರೆ ಸಾಗಲಿದೆ. ಇಲವಾಲದಲ್ಲಿ ಮಂಡ್ಯ ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರನ್ನು  ಯಾತ್ರೆ ಸೇರಿಸಿಕೊಳ್ಳಲಿದೆ.  ಮಾಜಿ ಸಚಿವ ಸಿಎಸ್.ಪುಟ್ಟರಾಜು ನೇತೃತ್ವದಲ್ಲಿ ಕಾರ್ಯಕರ್ತರು ಆಗಮಿಸಲಿರುವರು.