ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಹತ್ಯೆ ಪ್ರಕರಣವನ್ನು ಎನ್ ಐ ಎ ಗೆ ಒಪ್ಪಿಸಲು ಬಜಪೆಯಲ್ಲಿ ಜನಾಗ್ರಹ ಸಭೆ ನಡೆಯಿತು. ಸಭೆಯಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಭಾಷಣ ಮಾಡಿದರು. ಈ ಮಳೆ ಬಜಪೆಯ ಸುಹಾಸ್ ನ ಬಿದ್ದ ರಕ್ತವನ್ನು ಅಳಿಸಬಹುದು. ಆದರೆ ನಮ್ಮ ಎದೆಯಲ್ಲಿ ಉರಿಯುತ್ತಿರುವ ಸೇಡಿನ ಕಿಚ್ಚನ್ನು ಆರಿಸೋದಿಲ್ಲ. ಹಿಂದುತ್ವಕ್ಕೆ ಕೆಲಸ ಮಾಡಿರೋದಕ್ಕೆ ರೌಡಿ ಶೀಟರ್ ಪಟ್ಟ ಕಟ್ಟಲಾಗಿದೆ ಎಂದರು.
ಪೊಲೀಸ್ ತನಿಖೆಯಲ್ಲಿ ನಂಬಿಕೆಯಿಲ್ಲ.ಈ ಪ್ರಕರಣ ಎನ್ ಐ ಎ ಗೆ ವಹಿಸಲೇಬೇಕು. ಸುಹಾಸ್ ಹತ್ಯೆ ಭಯೋತ್ಪಾದನಾ ಚಟುವಟಿಕೆಯ ಕೆಲಸವಾಗಿದೆ. ಎಲ್ಲಾ ಕಗ್ಗೊಲೆಗಳಿಗೆ ಹಿಂದೂ ಸಮಾಜ ಉತ್ತರ ಕಂಡುಕೊಳ್ಳುತ್ತದೆ. ಹಿಂದೂ ಸಮಾಜ ದುರ್ಬಲರ ಮೇಲೆ ಕೈ ಎತ್ತಲ್ಲ. ಆದರೆ ಧರ್ಮಕ್ಕೆ ಧಕ್ಕೆಯಾದರೆ ಪ್ರತಿರೋಧದ ದಾಳಿಗೆ ಸಮಾಜ ಸಿದ್ಧವಾಗಿದೆ.
ಈ ನೆಲ ಹಿಂದುತ್ವದ ಪ್ರಯೋಗಶಾಲೆ ಆಗದಿದ್ರೆ ಭಯೋತ್ಪಾದನೆಯ ಪ್ರಯೋಗಶಾಲೆ ಆಗುತ್ತಿತ್ತು. ಸುಹಾಸ್ ಶೆಟ್ಟಿರಂತಹ ಅನೇಕ ಯುವಕರು ಮೈ ಮೇಲೆ ಅಪಾಯ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ೨೦೦೬ ರಲ್ಲಿ ಪಿಎಫ್ ಐ ರಚನೆಯಾಗಿತ್ತು. ೨೦೪೭ ಕ್ಕೆ ಭಾರತವನ್ನು ಇಸ್ಲಾಮಿಕ್ ಕಂಟ್ರಿ ಮಾಡುವ ಉದ್ದೇಶ ಹೊಂದಿದ್ದಾರೆ. ಕೇರಳದಲ್ಲಿ ಪಿಎಫ್ ಐ ಗೆ ತರಬೇತಿ ನೀಡಿದವರು ಕೇರಳದ ಮಾಜಿ ಪೊಲೀಸ್ ಅಧಿಕಾರಿಗಳು ಎಂದರು.
ಈ ಪ್ರಕರಣದಲ್ಲೂ ಪೊಲೀಸ್ ಇದ್ದಾನೆ ಅವನ ತನಿಖೆಯಾಗಬೇಕು. ಸುಹಾಸ್ ನ ಹತ್ಯೆ ಆಗೋದು ಈ ಭಾಗದ ಯುವಕರಿಗೆ ಮೊದಲೇ ಗೊತ್ತಿತ್ತು. ಆದರೆ ಪೊಲೀಸರು ಆ ಪಾಪಿಗಳನ್ನು ತಪಾಸಣೆ ಮಾಡಿಲ್ಲ. ಬಹಿರಂಗವಾಗಿ ಹತ್ಯೆ ಆದಾಗ ಇಲ್ಲಿ ಜನ ಕೋಟೆ ಕಟ್ಟಿ ರಕ್ಷಣೆ ನೀಡಿದ್ದಾರೆ. ನಾವು ಒಂದು ಸಂಕಲ್ಪ ಸ್ವೀಕಾರ ಮಾಡಬೇಕು. ಹಿಂದುತ್ವಕ್ಕೆ ಕೆಲಸ ಮಾಡುವವರನ್ನು ಬೆಂಬಲ ನೀಡಬೇಕು. ಅವರನ್ನು ಅಪಮಾನ ಮಾಡುವಂತ ಕೆಲಸವನ್ನು ಹಿಂದೂ ಸಮಾಜ ಮಾಡಬಾರದು ಎಂದರು.

