ಮಂಗಳೂರು: ಪಹಲ್ಗಾಮ್ ದಾಳಿ ವೇಳೆ ಉಗ್ರರಿಗೆ ಹಿಂದೂಗಳು ಕೇವಲ ತಲ್ವಾರ್ ತೋರಿಸಿದ್ರೆ ಕಥೆಯೇ ಬೇರೆಯಾಗುತ್ತಿತ್ತು ಎಂದು ಮಂಜೇಶ್ವರದ ವರ್ಕಾಡಿಯಲ್ಲಿ RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆ ನೀಡಿದ್ದಾರೆ.
ಹಿಂದೂಗಳು ಮನೆಯಲ್ಲಿ ಒಂದೊಂದು ತಲ್ವಾರ್ ಇಟ್ಟುಕೊಳ್ಳಲು ಕರೆ ನೀಡಿದರು. ಪಹಲ್ಗಾಮ್ ನಲ್ಲಿ ಉಗ್ರರಿಗೆ ತಲವಾರು ತೋರಿಸಿದ್ರೆ ಸಾಕಿತ್ತು. ಹೆಣ್ಣುಮಕ್ಕಳು ವ್ಯಾನಿಟಿ ಬ್ಯಾಗಿನಲ್ಲಿ ಪೌಡರ್, ಬಾಚಣಿಗೆ ಜೊತೆಗೆ ಚೂರಿ ಇಟ್ಟುಕೊಳ್ಳಿ ಎಂದರು.
6 ಇಂಚಿನ ಚೂರಿ ಇಟ್ಟುಕೊಳ್ಳಲು ಲೈಸೆನ್ಸ್ ಬೇಡ. ಸಂಜೆ ಮೇಲೆ ಓಡಾಡಿದ್ರೆ ನಿಮ್ಮ ಮೇಲೆ ಖಂಡಿತಾ ಆಕ್ರಮಣ ಮಾಡುತ್ತಾರೆ. ಆಕ್ರಮಣ ಮಾಡಬೇಡಿ ಎಂದು ಬೇಡಿಕೊಂಡ್ರೆ ನಿಮ್ಮ ಕಥೆ ಮುಗಿತು . ಅದರ ಬದಲು ಚೂರಿ ತೋರಿಸಿ ಸಾಕು ಹೆದರಿ ಓಡುತ್ತಾರೆ.
ಹಿಂದೂ ಮುಸ್ಲಿಂ ಗಲಾಟೆ ಅಂದರೆ ಮುಸ್ಲಿಂರು ಹೊಡೀತಾರೆ ಹಿಂದೂಗಳು ಓಡುತ್ತಾರೆ ಅಂತ ಇತ್ತು . ಆದರೆ ಈಗ ಹಿಂದೂ ಕೇವಲ ತಿರುಗಿ ಬಿದ್ದಿದ್ದಾನೆ , ಇನ್ನು ಹೊಡಿಲಿಕ್ಕೆ ಶುರು ಮಾಡಲಿಲ್ಲ. ನಾವು ಎದ್ದು ನಿಲ್ಲಬೇಕು , ಮನೆಯಲ್ಲಿ ಒಂದು ಒಂದು ತಲ್ವಾರ್ ಇಟ್ಟುಕೊಳ್ಳಿ ಎಂದರು.

