ಪುತ್ತೂರು: ಹಾಲಿ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈಗೆ ಬಿಜೆಪಿ ಗಾಳ ಹಾಕಿದ್ದು, ಅರುಣ್ ಪುತ್ತಿಲ ಬದಲು ಅಶೋಕ್ ರೈಯನ್ನೇ ಬಿಜೆಪಿಗೆ ಸೆಳೆದು ಅಭ್ಯರ್ಥಿಯಾಗಿಸೋ ಪ್ಲಾನ್ ಹಾಕಿದ್ದಾರೆ. ವಿಧಾನಸಭಾ ಚುನಾವಣೆ ಹೊತ್ತಲ್ಲಿ ಬಂಡಾಯವೆದ್ದ ಪುತ್ತಿಲ ವಿರುದ್ದ ಸೇಡಿನ ಅಸ್ತ್ರ ಪ್ರಯೋಗವಾಗುವ ಸಾಧ್ಯತೆ ಇದೆ. ವಿಎಚ್ ಪಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ ಅಶೋಕ್ ರೈ ಕಾಣಿಸಿಕೊಂಡ ಬೆನ್ನಲ್ಲೇ ಭಾರೀ ಚರ್ಚೆಯಾಗಿದೆ.
ಮಾಜಿ ಬಿಜೆಪಿಗನ್ನೇ ಮತ್ತೆ ಪಕ್ಷಕ್ಕೆ ಸೆಳೆಯಲು ಪ್ರಯತ್ನ ನಡೆಯುತ್ತಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆ ಇರುವ ಕಾಂಗ್ರೆಸ್ ಶಾಸಕ ಅಶೋಕ್ ರೈಯವರು ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆ ಕಾಂಗ್ರೆಸ್ ನಿಂದ ಶಾಸಕರಾದ ಅಶೋಕ್ ರೈ ಸ್ಪರ್ಧಿಸಿದ್ದಾರೆ. ಬಿಜೆಪಿ ಮತ್ತು ಪುತ್ತಿಲ ಬಂಡಾಯದ ಲಾಭ ಪಡೆದು ಅಶೋಕ್ ರೈ ಶಾಸಕರಾಗಿದ್ದಾರೆ. ಆದರೆ ಮುಂದಿನ ಚುನಾವಣೆಯಲ್ಲಿ ಅಶೋಕ್ ರೈಗೆ ಕಾಂಗ್ರೆಸ್ ನಿಂದ ಗೆಲುವು ಸುಲಭವಲ್ಲ,
ಹೀಗಾಗಿ ಬಿಜೆಪಿ ಸೇರಿ ಟಿಕೆಟ್ ಸಿಕ್ಕರೆ ಅಶೋಕ್ ರೈ ಗೆಲುವು ಸಾಧ್ಯ. ಈ ನಿಟ್ಟಿನಲ್ಲಿ ಸಂಘಪರಿವಾರದ ಕೆಲ ನಾಯಕರಿಂದಲೂ ಅಶೋಕ್ ರೈ ಪರ ಒಲವು ಮೂಡಿದ್ದು, ಕಾಂಗ್ರೆಸ್ ಸೇರಿದರೂ ಸಂಘ ಹಾಗೂ ಪರಿವಾರದ ಹಲವರ ಜೊತೆ ಅಶೋಕ್ ರೈ ಒಡನಾಟ ಒಡನಾಟ ಹೊಂದಿದ್ದಾರೆ. ಹೀಗಾಗಿಯೇ ವಿಎಚ್ ಪಿ ಕಾರ್ಯಕ್ರಮಕ್ಕೂ ಅಶೋಕ್ ರೈಗೆ ಆಹ್ವಾನ ಸಿಕ್ಕಿದೆ. ಸದ್ಯ ಸಂಘಪರಿವಾರದ ವಲಯದಲ್ಲಿ ಅರುಣ್ ಪುತ್ತಿಲ ವಿರುದ್ಧ ಮುನಿಸು ಮುಗಿಯಲಿಲ್ಲ. ಪುತ್ತಿಲಗೆ ಮುಂದಿನ ಚುನಾವಣೆಗೆ ಟಿಕೆಟ್ ನೀಡಲು ಈಗಲೂ ಪಕ್ಷದ ವಲಯದಲ್ಲಿ ಅಪಸ್ವರ ಎದ್ದಿದೆ.
ಪುತ್ತಿಲ ಬಿಜೆಪಿ ಸೇರಿದ್ದರೂ ಹಲವು ಬಿಜೆಪಿ ಹಾಗೂ ಸಂಘದ ನಾಯಕರಿಗೆ ಮುನಿಸು ಉಂಟಾಗಿದೆ. ಹೀಗಾಗಿ ಪುತ್ತಿಲ ವಿರುದ್ದ ಬಿಜೆಪಿ ಹಾಗೂ ಸಂಘದಲ್ಲೇ ಮುನಿಸು ಮುಂದುವರಿದಿದೆ. ಇದನ್ನೇ ಮುಂದಿಟ್ಟು ಅಶೋಕ್ ರೈ ಮೂಲಕ ದಾಳ ಉರುಳಿಸೋ ಪ್ಲಾನ್ ಸಾಧ್ಯತೆ ಇದೆ.

