ಮಂಗಳೂರು: ಪ್ರಕಾಶ್ ರಾಜ್ ನನ್ನೊಂದಿಗೆ ಮಾತನಾಡಿದ್ದರು; ಹೇಳಿದಂತೆ ಕೇಳಿದರೆ ನಿನ್ನನ್ನು ಬಂದು ತಬ್ಬಿಕೊಳ್ಳುತ್ತೇನೆ ಎಂದಿದ್ದರು ಎಂದು ಹೈಕೋರ್ಟ್ ಮುಂದೆ ಸಿ ಎನ್ ಚಿನ್ನಯ್ಯ ಎಳೆಎಳೆಯಾಗಿ ಬಿಚ್ಚಿಟ್ಟರು.

ಧರ್ಮಸ್ಥಳ ಪ್ರಕರಣದ ಪ್ರಮುಖ ಆರೋಪಿ ಸಿ ಎನ್ ಚಿನ್ನಯ್ಯ ಸಲ್ಲಿಸಿದ್ದ ರಿಟ್ ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರು ಕಾಣಿಸಿಕೊಂಡ ನಂತರ ಅವರು ರಾಜಕೀಯ ಮತ್ತು ಕಾನೂನು ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

ಧರ್ಮಸ್ಥಳದಲ್ಲಿ ಸಂತ್ರಸ್ತರ ಮೃತದೇಹಗಳನ್ನು ತಾನು ಹೂತಿದ್ದೇನೆ ಎಂದು ಹೇಳಿಕೊಂಡಿದ್ದ ಸ್ವಚ್ಛತಾ ಕಾರ್ಮಿಕ ಸಿ ಎನ್ ಚಿನ್ನಯ್ಯ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ವರದಿಯನ್ನು ಸಲ್ಲಿಸುವಂತೆ ವಿಶೇಷ ತನಿಖಾ ತಂಡಕ್ಕೆ (SIT) ನಿರ್ದೇಶನ ನೀಡುವಂತೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ.

View this post on Instagram

A post shared by News Karnataka (@newskarnataka)