ಮಂಗಳೂರು: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಂಗಳೂರು (ಕೆಎಂಸಿ) ಇಲ್ಲಿಯ ರೇಡಿಯೇಶನ್ ಆಂಕೋಲಜಿ ವಿಭಾಗವು ಬೇಬಿಗ್ ಮೆಡಿಕಲ್ ಸಿಸ್ಟಮ್ಸ್ ಸಹಯೋಗದಲ್ಲಿ ಸಜಿನೋವಾ ಬ್ರಾಕಿಥೆರಪಿ ವ್ಯವಸ್ಥೆಯ ಕುರಿತು ಅಂತರರಾಷ್ಟ್ರೀಯ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.
ಈ ಕಾರ್ಯಕ್ರಮ ಇಂಡಸ್ಟ್ರಿ-ಅಕಾಡೆಮಿಯಾ ಸಹಕಾರದ ಮೂಲಕ ಜಾಗತಿಕ ಮಟ್ಟದಲ್ಲಿ ಕ್ಯಾನ್ಸರ್ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಲು ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಕಾರ್ಯಕ್ರಮದ ಭಾಗವಾಗಿ, ಮೌರಿಶಿಯಸ್ನ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ (ಎನ್ಸಿಐ) ನ ವೈದ್ಯರು ಮತ್ತು ವೈದ್ಯಕೀಯ ಭೌತಶಾಸ್ತ್ರಜ್ಞರ ತಂಡವು 2025ರ ಜೂನ್ 23ರಿಂದ 27ರವರೆಗೆ ಕೆಎಂಸಿ ಆಸ್ಪತ್ರೆ ಅತ್ತಾವರಕ್ಕೆ ಭೇಟಿ ನೀಡಿ ಸಂಪೂರ್ಣ ತರಬೇತಿಯನ್ನು ಪಡೆಯಲಿದ್ದಾರೆ. ಐದು ದಿನಗಳ ಹಸ್ತಚಾಲಿತ ಕಾರ್ಯಾಗಾರದಲ್ಲಿ ಬೇಬಿಗ್ ವ್ಯವಸ್ಥೆಯ ಉಪಕರಣಗಳು, ಸಾಫ್ಟ್ವೇರ್ ಹಾಗೂ ಚಿಕಿತ್ಸೆ ವಿದಾನಗಳ ಬಗ್ಗೆ ಆಳವಾದ ತರಬೇತಿ ನೀಡಲಾಗುತ್ತದೆ.
ಬ್ರಾಕಿಥೆರಪಿ ಎಂದರೆ ಕ್ಯಾನ್ಸರ್ ತಗುಲಿರುವ ಭಾಗಕ್ಕೆ ನಿಖರವಾಗಿ ಹೆಚ್ಚಿನ ಪ್ರಮಾಣದ ಕಿರಣ ಚಿಕಿತ್ಸೆಯನ್ನು ನೀಡುವ ವಿಧಾನ. ಇದರಿಂದ ರೋಗಭಾಗಕ್ಕೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಮತ್ತು ಆರೋಗ್ಯಕರ ಅಂಗಾAಗಗಳನ್ನು ರಕ್ಷಿಸಬಹುದು. ಸಾಮಾನ್ಯವಾಗಿ ಇದನ್ನು ಗರ್ಭಕಂಠದ ಕ್ಯಾನ್ಸರ್, ಪ್ರೊಸ್ಟೇಟ್ ಕ್ಯಾನ್ಸರ್ ಮತ್ತು ಸ್ತನದ ಕ್ಯಾನ್ಸರ್ ಚಿಕಿತ್ಸೆಗಾಗಿ ಬಳಸಲಾಗುತ್ತದೆ. ಕೆಎಂಸಿ ಆಸ್ಪತ್ರೆ ಅತ್ತಾವರವು ಮಂಗಳೂರಿನಲ್ಲಿ ಈ ತಂತ್ರಜ್ಞಾನವನ್ನು ಪ್ರಾರಂಭಿಸಿದ ಮೊದಲ ಸಂಸ್ಥೆಯಾಗಿದೆ.
ಕೆಎAಸಿ ಆಸ್ಪತ್ರೆ ಅತ್ತಾವರದ ಆಂಕೋಲಾಜಿ ವಿಭಾಗವು ತನ್ನ ಉನ್ನತ ಮಟ್ಟದ ಸೇವೆ ಮತ್ತು ಶಿಕ್ಷಣದಿಂದ ಪ್ರಸಿದ್ಧಿಯಾಗಿದೆ. ಈ ತರಬೇತಿ ಇಂಡಸ್ಟ್ರಿ-ಅಕಾಡೆಮಿಯಾ ಸಹಕಾರದ ಮಹತ್ವವನ್ನು ತೋರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಂಶೋಧನೆ, ತರಬೇತಿ ಮತ್ತು ತಂತ್ರಜ್ಞಾನ ವಿನಿಮಯಕ್ಕೆ ದಾರಿ ಮಾಡಿಕೊಡಲಿದೆ.

