ಮಂಗಳೂರು: ಮಂಗಳೂರು ನಗರ ಪೊಲೀಸ್ ಮತ್ತು ದ.ಕ ಜಿಲ್ಲಾ ಪೊಲೀಸ್ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಅಂತರಾಷ್ಟ್ರೀಯ ಮಾದಕ ಮತ್ತು ವಸ್ತು ವಿರೋಧಿ ದಿನ ೨೦೨೫ ಕಾರ್ಯಕ್ರಮ ಮಂಗಳೂರಿನ ಪುರಭವನದಲ್ಲಿ ನೆರವೇರಿತು.
ಕಾರ್ಯಕ್ರಮಕ್ಕೆ ಮಂಗಳೂರು ನಿಟ್ಟೆ ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ. ಎಂ ಎಸ್ ಮುಡಿತ್ತಾಯ, ತುಳು ಚಲನ ಚಿತ್ರ ನಟ ರೂಪೇಶ್ ಶೆಟ್ಟಿ, ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ದ.ಕ ಜಿಲ್ಲಾಧಿಕಾರಿ ಎಚ್ ವಿ ದರ್ಶನ್, ದ.ಕ ಜಿಲ್ಲಾ ಎಸ್ಪಿ ಡಾ. ಅರುಣ್. ಕೆ ಇತರ ಗಣ್ಯರು ಸೇರಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ಬಳಿಕ ಮಂಗಳೂರು ನಿಟ್ಟೆ ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ. ಎಂ ಎಸ್ ಮುಡಿತ್ತಾಯ ಮಾತನಾಡಿ ಭಾರತ ಈಗಾಗಲೇ ಅಭಿವೃದ್ದಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಬಂದಿದ್ದು ಮುಂದಿನ ದಿನಗಳಲ್ಲಿ ಮೂರನೇ ಸ್ಥಾನಕ್ಕೆ ಏರಲಿದೆ. ಈ ಅಭೊವೃದ್ದಿ ಅಥವ ವಿಕಸಿತ ಭಾರತ ಯಾರಿಗೆ ಎಂದರೆ ಯುವ ಪೀಳಿಗೆಗೆ ಆಗಿದೆ.
ಯುವ ಪೀಳಿಗೆ ದುಷ್ಚಟದತ್ತ ಆಕರ್ಷಿತರಾಗುವ ಒಂದು ಹಂತ ಇದಾಗಿದೆ. ಇಂತಹ ಕಾರ್ಯಕ್ರಮದ ಮೂಲಕ ಯುವ ಪೀಳಿಗೆಯನ್ನು ವಿಕಸಿತ ಭಾರತದತ್ತ ಮುನ್ನಡೆಸುವ ಯೋಜನೆಯನ್ನು ಮಂಗಳೂರು ಪೊಲೀಸ್ ಇಲಾಖೆ ಮಾಡ್ತಾ ಇದೆ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಆಗಲಿ ಇದರ ಸದುಪಯೋಗ ಯುವ ಪೀಳಿಗೆ ಹೆಚ್ಚಾಗಿ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಅಪರಾದ ಮತ್ತು ಟ್ರಾಫಿಕ್ ಉಪ ಆಯುಕ್ತರಾದ ಸಿದ್ದಾರ್ಥ್ ಗೋಯಲ್, ಉಪ ಪೊಲೀಸ್ ಆಯುಕ್ತರಾದ ಕೆ. ರವಿಶಂಕರ್, ಸಿಆರ್ ವಿಭಾಗದ ಉಪ ಪೊಲೀಸ್ ಆಯುಕ್ತ ಉಮೇಶ್ ಪಿ, ಕೆಎಸ್ ಹೆಗ್ಡೆ ವೈಧ್ಯಕೀಯ ಅಕಾಡೆಮಿ ಉಪನ್ಯಾಸಕಿ ಮನೋವೈಧ್ಯಕೀಯ ಸಮಾಜ ಸೇವಕಿ ಅಗ್ನಿತಾ ಐವನ್ ಮತ್ತಿತ್ತರರು ಉಪಸ್ಥಿತರಿದ್ದರು.

