ಮಂಗಳೂರು: ಕಿಂಗ್ಸ್ ಚೆಸ್ ಅಕಾಡೆಮಿ ವತಿಯಿಂದ ಜೂ. 22 ರಂದು ಭಾನುವಾರ ದಂದು ಮಂಗಳೂರು ನಗರದ ಬಾಲಂಭಟ್ ಹಾಲ್ ನಲ್ಲಿ ಒಂದು ಅಂತರ್ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ ಆಯೋಜಿಸಲಾಗಿದೆ.

ಈ ಸ್ಪರ್ಧೆಯ ಉದ್ದೇಶ ಗ್ರಾಮೀಣ ಹಾಗೂ ನಗರ ಭಾಗದ ಮಕ್ಕಳಿಗೆ, ಬಾಲಕರಿಗೆ ಹಾಗೂ ಯುವ ಪ್ರತಿಭೆಗಳಿಗೆ ಸ್ಪರ್ಧಾತ್ಮಕ ವೇದಿಕೆಯನ್ನು ಒದಗಿಸುವುದು ಹಾಗೂ ಚೆಸ್ ಆಟದ ಮಹತ್ವವನ್ನು ಮತ್ತಷ್ಟು ಪ್ರಚಾರ ಮಾಡುವುದಾಗಿದೆ. ವಿವಿಧ ವಯೋಮಾನದ ಸ್ಪರ್ಧಾರ್ಥಿಗಳು ಪಾಲ್ಗೊಳ್ಳಲಿದ್ದು, ವಿಜೇತರಿಗೆ ಟ್ರೋಫಿಗಳು, ಪ್ರಮಾಣಪತ್ರಗಳು ಮತ್ತು ಪಾರಿತೋಷಿಕಗಳು ನೀಡಲಾಗುತ್ತದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶ ಇದೆ ಹಾಗೂ ನೊಂದಾಯಣೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ. ಈ ಚೆಸ್ ಸ್ಪರ್ಧೆಯ ಮೂಲಕ ವಿದ್ಯಾರ್ಥಿಗಳಲ್ಲಿ ಚಿಂತನೆಯ ಶಕ್ತಿ, ಏಕಾಗ್ರತೆ ಮತ್ತು ತಾಳ್ಮೆಯಂತಹ ಗುಣಗಳ ಬೆಳವಣಿಗೆಗೆ ಉತ್ತೇಜನ ಸಿಗಲಿದೆ.

ಸ್ಪರ್ಧೆಯ ಯಶಸ್ಸಿಗೆ ಪ್ರಾಯೋಜಕರು, ಶಿಕ್ಷಣ ಸಂಸ್ಥೆಗಳು ಹಾಗೂ ಚೆಸ್ ಪ್ರೇಮಿಗಳ ಸಹಕಾರವನ್ನು ನಾವು ಕೇಳುತ್ತಿದ್ದೇವೆ. ಈ ಸಂಸ್ಥೆಯ ಮೂಲಕ ಮಂಗಳೂರಿನಲ್ಲಿ ಚೆಸ್ ಅಭ್ಯಾಸದ ಆಳತೆಯನ್ನು ವೃದ್ಧಿಸುವ ಉದ್ದೇಶವಿದೆ.