ಮಂಗಳೂರು: ಕರ್ನಾಟಕದಲ್ಲಿ ರಾಜ್ಯ ಸರ್ಕಾರದಿಂದ ಹಿಂದುಳಿದ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಬಿಜೆಪಿ ಅವಧಿಯಲ್ಲಿ ನೀಡಿದ ಕೋಟ್ಯಂತರ ಅನುದಾನ ರದ್ದು ಮಾಡಿದೆ. ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ ಎಂದು ಅನ್ಯಾಯ ಮಾಡ್ತಾರೆ. ಇವ್ರ ಈ ಅನ್ಯಾಯದ ಬಗ್ಗೆ ದಾಖಲೆ ಸಮೇತ ನೀಡುತ್ತೇನೆ ಎಂದು ಮಂಗಳೂರಿನಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿಕೆ ನೀಡಿದ್ದಾರೆ.
ಹಿಂದುಳಿದ ಸಮುದಾಯದ ಕಲ್ಯಾಣ ಕ್ಕೆ ಇಟ್ಟ ಅನುದಾನ ವಾಪಾಸು ಪಡೆದಿದೆ. ೧೦೯೩ ಹಿಂದುಳಿದ ವರ್ಗಗಳ ಕಾಮಗಾರಿ ರದ್ದು ಪಡಿಸಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಿ ಅನುದಾನ ಇಲ್ಲ ಎನ್ನುತ್ತಿದೆ. ಬಿಲ್ಲವ ಸಮುದಾಯದ ಅಭಿವೃದ್ಧಿ ನಿಗಮ ಮಾಡಲು ಆಗದ ಸರ್ಕಾರದ. ಮಂಗಳೂರಿನಿಂದ ಬೆಂಗಳೂರಿಗೆ ಸಮುದಾಯದವರು ಹೋರಾಟ ಮಾಡಿದ್ರು. ಆದ್ರೆ ಈ ವರೆಗೆ ಒಂದು ಅಧ್ಯಕ್ಷರ ನೇಮಕ ಆಗಿಲ್ಲ ಎಂದರು.
ಕೇವಲ ರಾಜಕೀಯಕ್ಕೆ ಇದನ್ನು ಬಳಕೆ ಮಾಡಿದ್ದಾರೆ. ಒಂದು ಅಧ್ಯಕ್ಷ ನೇಮಕ ಮಾಡಲಾಗದ ನಾಲಾಕ್ ಸರ್ಕಾರ. ಈಗಾ ಬಿಲ್ಲವ ಸಮುದಾಯದ ಮೌನವಾಗಿದೆ. ಪರಿಶಿಷ್ಟ ಜಾತಿ ಪಂಗಡದ ಅನುದಾನ ರದ್ದು ಪಡಿಸಿದೆ. ಹಿಂದುಳಿದ ವರ್ಗಗಳಿಗೆ ಸರ್ಕಾರದ ಯೋಜನೆ ಸಿಕ್ಕಿಲ್ಲ. ಈ ಸರ್ಕಾರ ಬಡವರ ಪರವಾಗಿ ನಿಂತಿಲ್ಲ.
ಕೇವಲ ಹಗರಣಗಾರರ ಹಿಂದೆ ಸರ್ಕಾರ ನಿಂತಿದೆ. ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸವಿತ ಸಮಾಜಕ್ಕೆ ಅನುದಾನ ಶೂನ್ಯ. ಈ ಸಮುದಾಯಗಳಿಗೆ ನೀಡಬೇಕಾದ ಯೋಜನೆ ಕೊಡಿ. ಇಲ್ಲವೇ ಅಧಿಕಾರದಿಂದ ಇಳಿದು ಬನ್ನಿ. ನಮ್ಮ ಅಧಿಕಾರ ಅವಧಿ ಕೊರೋನಾ ಸಮಯ ಉತ್ತಮ ಯೋಜನೆ ನೀಡಿದ್ದೇವೆ ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿಕೆ ನೀಡಿದ್ದಾರೆ.

