ಮಂಗಳೂರು : ಪ್ರತಿಭಟನೆ ಸಂದರ್ಭ ABVP ಮುಖಂಡನಿಗೆ ಪೊಲೀಸರಿಂದ ಕಪಾಳ ಮೋಕ್ಷ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಪಿ ರವೀಶ್ ನಾಯಕ್ ವಿರುದ್ಧ ABVP ಕ್ರಮಕ್ಕೆ ಆಗ್ರಹಿಸಲಾಯಿತು. ಮಂಗಳೂರಿನ ಕ್ಲಾಕ್ ಟವರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಪೊಲೀಸರ ವಿರುದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮಂಗಳೂರಿನ ಸಂತ ಅಗ್ನೆಸ್ ಕಾಲೇಜಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ABVP ಮುಖಂಡನಿಗೆ ಪೊಲೀಸ್ ಅಧಿಕಾರಿಯಿಂದ ಹಲ್ಲೆ ಆರೋಪ ಕೇಳಿಬಂದಿದೆ. ಎಸಿಪಿ ರವೀಶ್ ನಾಯ್ಕ್ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯ ಮಾಡಲಾಯಿತು.

ವಿದ್ಯಾರ್ಥಿಗಳ ಮನವಿ ಪಡೆಯಲು ಕಮಿಷನರ್ ಸ್ಥಳಕ್ಕೆ ಬರುವಂತೆ ಆಗ್ರಹಿಸಲಾಯಿತು. ಮಂಗಳೂರು ಕಮಿಷನರ್ ಸುಧೀರ್ ರೆಡ್ಡಿ ಬರುವಂತೆ ಆಗ್ರಹಿಸಲಾಯಿತು. ಸ್ಥಳದಲ್ಲಿದ್ದ ಇನ್ಸ್ ಪೆಕ್ಟರ್ ಜೊತೆ ಎಬಿವಿಪಿ ಮುಖಂಡರು ಆಗ್ರಹಿಸಿದರು. ಪ್ರತಿಭಟನಾ ಸ್ಥಳದಲ್ಲೇ ಎಬಿವಿಪಿ ವಿದ್ಯಾರ್ಥಿಗಳು ಕುಳಿತರು. ಕಮಿಷನರ್ ಸ್ಥಳಕ್ಕೆ ಬರುವಂತೆ 11 ಗಂಟೆಯವರೆಗೆ ಡೆಡ್ ಲೈನ್ ಹಾಕಿದರು.

ಆ ಬಳಿಕ ನೇರವಾಗಿ ಕಮಿಷನರ್ ಕಚೇರಿ ತೆರಳುವ ಎಚ್ಚರಿಕೆ ನೀಡಲಾಯಿತು. ಪ್ರತಿಭಟನೆ ಕೈ ಬಿಡುವಂತೆ ಎಬಿವಿಪಿ ವಿದ್ಯಾರ್ಥಿಗಳಿಗೆ ಪೊಲೀಸರು ಮನವೊಲಿಕೆ ಮಾಡಿದರು. ಆದರೆ ಮನವೊಲಿಕೆಗೂ ಜಗ್ಗದೆ ಪ್ರತಿಭಟನೆ ಮುಂದುವರಿದಿದೆ. ಎಸಿಪಿ ರವೀಶ್ ವಿರುದ್ದ ಎಫ್ ಐಆರ್ ದಾಖಲಿಸಲು ಆಗ್ರಹಿಸಲಾಯಿತು. ವಿದ್ಯಾರ್ಥಿ ನಾಯಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಮುಂದುವರೆದಿದೆ. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಎಬಿವಿಪಿ ನಾಯಕರ ಪಟ್ಟು ಹಿಡಿದರು.