ಮಂಗಳೂರು: 2025-26ನೇ ಸಾಲಿನಲ್ಲಿ ಆಟಿಸಂ, ಬೌದ್ಧಿಕ ವಿಕಲತೆ, ಬಹುವಿಧ ಅಂಗವಿಕಲತೆ (ಶ್ರವಣ ಮತ್ತು ದೃಷ್ಟಿ ನ್ಯೂನ್ಯತೆ) ಕಾಯಿಲೆಯಿಂದ ಬಳಲುತ್ತಿರುವ ವಿಕಲಚೇತನ ವ್ಯಕ್ತಿಗಳ ಆರೈಕೆದಾರರಿಗೆ ಪ್ರತಿ ಮಾಹೆ ರೂ.1,000/- ಪ್ರೋತ್ಸಾಹ ಧನವನ್ನು ನೀಡುವ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ.

ಈ ಯೋಜನೆಗೆ 1)ವಿಶಿಷ್ಟ ಗುರುತಿನ ಚೀಟಿ & ಪ್ರಮಾಣ ಪತ್ರ ಕಡ್ಡಾಯ (ವಿಕಲತೆಯ ಪ್ರಮಾಣ ಶೇ.75% ಮತ್ತು ಅದಕ್ಕಿಂತ ಹೆಚ್ಚಾಗಿರಬೇಕು) 2)ಆರೈಕೆದಾರರು ಕರ್ನಾಟಕದಲ್ಲಿ ವಾಸವಿರುವ ಬಗ್ಗೆ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಪಡೆದ ವಾಸಸ್ಥಳ ದೃಢೀಕರಣ ಪ್ರಮಾಣ ಪತ್ರ, 3)ಆರೈಕೆದಾರರು 18 ವರ್ಷ ಮೇಲ್ಪಟ್ಟವರಾಗಿರಬೇಕು 4)ವಿಕಲಚೇತನರ ಹಾಗೂ ಆರೈಕೆದಾರರ ಆಧಾರ್ ಕಾರ್ಡ್

5)ಜಂಟಿ ಭಾವಚಿತ್ರ (ವಿಕಲಚೇತನ ವ್ಯಕ್ತಿಗಳ ಮತ್ತು ಆರೈಕೆದಾರರ) 6)ಆರೈಕೆದಾರರ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ 7)ಆರೈಕೆÉ ಪಡೆಯುವವರು & ಆರೈಕೆ ಮಾಡುವವರು ಪರಸ್ಪರ ಒಪ್ಪಿರುವ ಬಗ್ಗೆ ವiತು ಉತ್ತಮ ಆರೈಕೆ ಒದಗಿಸುವ ಬಗ್ಗೆ ಲಿಖಿತ ಪ್ರಮಾಣ ಪತ್ರ 8)ವಿಕಲಚೇತನ ವ್ಯಕ್ತಿಯ ಜೀವಂತ ಪ್ರಮಾಣ ಪತ್ರದ ಪ್ರತಿಯನ್ನು ಪ್ರತಿ ವರ್ಷ ಕಡ್ಡಾಯವಾಗಿ ಸಲ್ಲಿಸುವುದು. 9)ವಿಕಲಚೇತನ ವ್ಯಕ್ತಿಯ ಜೀವಂತ ಪ್ರಮಾಣ ಪತ್ರವನ್ನು ಪ್ರತೀ ವರ್ಷ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಪಡೆದು ಸಲ್ಲಿಸಬೇಕು ಹಾಗೂ ಬಿ.ಪಿ.ಎಲ್ ಕಾರ್ಡ್‍ದಾರರು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಅರ್ಹ ಫಲಾನುಭವಿಗಳು ಅರ್ಜಿಯನ್ನು ಆಯಾ ತಾಲೂಕಿನ ಎಂ.ಆರ್.ಡಬ್ಲ್ಯೂ ವಿ.ಆರ್.ಡಬ್ಲ್ಯೂ ಗಳಿಂದ ಪಡೆದು ವಿಕಲಚೇತನರ ಕಲ್ಯಾಣಾಧಿಕಾರಿಗಳ ಕಚೇರಿಗೆ ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸಲು ಜುಲೈ 5 ಕೊನೆಯ ದಿನ. ಹೆಚ್ಚಿನ ಮಾಹಿತಿಗೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ, ವಿಕಲಚೇತನರ ಹಾಗೂ ಹಿರಿಯನಾಗರಿಕರ ಸಬಲೀಕರಣ ಇಲಾಖೆ, ದ.ಕ. ಜಿಲ್ಲಾ ಪಂಚಾಯತ್ ಕಟ್ಟಡ, ಅಶೋಕನಗರ ಅಂಚೆ, ಕೊಟ್ಟಾರ, ಮಂಗಳೂರು ಹಾಗೂ ದೂರವಾಣಿ ಸಂಖ್ಯೆ.0824-2455999 ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.