ಮರೋಳಿ : ಸೇವೆ ಮತ್ತು ತ್ಯಾಗದ ಪರಿಶ್ರಮದೊಂದಿಗೆ ಸಮಾಜವನ್ನು ಕಟ್ಟಿದಾಗ ಸುದೃಢ ಸಮಾಜ ನಿರ್ಮಾಣವಾಗುತ್ತದೆ ಎಂದು ಮಂಗಳೂರು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ ನುಡಿದರು.
ವಿಶ್ವ ಹಿಂದೂ ಪರಿಷದ್ ಬಜರಂಗದಳ ಸೇವಾ ವಿಭಾಗ ಮರೋಳಿ ಖಂಡ ಸಮಿತಿ ಹಾಗೂ ಎ.ಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಎ.ಜೆ ರಕ್ತ ಕೇಂದ್ರ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ 25ನೇ ವರ್ಷದ ಪ್ರಯುಕ್ತ ಹಮ್ಮಿಕೊಳ್ಳಲಾದ ಮಾಸಿಕ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ವಿಶ್ವ ರಕ್ತ ದಾನಿಗಳ ದಿನದ ಪ್ರಯುಕ್ತ ರವಿವಾರ ಮರೋಳಿಯ ವಜ್ರಕಾಯ ರಂಗ ಮಂದಿರದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ವಿ ಎಚ್ ಪಿ, ಭಜರಂಗದಳ ಹಿಂದೂ ಸಮಾಜ, ಗೋವುಗಳನ್ನ ರಕ್ಷಣೆಯ ಮೂಲಕ ನಿಸ್ವಾರ್ಥವಾಗಿ ಸೇವೆ ಮಾಡುತ್ತಾ ಬೆಳೆದು ನಿಂತಿದೆ. ಕಾರ್ಯಕರ್ತರ ತ್ಯಾಗ, ಪರಿಶ್ರಮ ಇದರ ಹಿಂದಿದೆ ಎಂದು ಶ್ಲಾಘಸಿದರು. ಸೂರ್ಯನಾರಾಯಣ ದೇವಸ್ಥಾನ ಮರೋಳಿಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಜಪ್ಪುಗುಡ್ಡೆ ಗುತ್ತು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್, ವಿಶ್ವ ಹಿಂದೂ ಪರಿಷದ್ ಕರ್ನಾಟಕ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್, ಪ್ರಾಂತ ಸಹ ಸೇವಾ ಪ್ರಮುಖ್ ಗೋಪಾಲ್ ಕುತ್ತಾರ್, ವಿಶ್ವ ಹಿಂದೂ ಪರಿಷದ್ ಮಂಗಳೂರು ಉಪಾಧ್ಯಕ್ಷ ರವಿ ಕಾಪಿಕಾಡ್, ವಿಶ್ವ ಹಿಂದೂ ಪರಿಷದ್ ನಾಗುರಿ ಪ್ರಖಂಡದ ಅಧ್ಯಕ್ಷ ಜಯಂತ್ ಜೆ. ಕೋಟ್ಯಾನ್, ಎ.ಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ & ರಿಸರ್ಚ್ ಸೆಂಟರ್‌ನ ವೈಸ್ ಡೀನ್ ಡಾ. ಸುಶಿತ್,
ಎ.ಜೆ. ಆಸ್ಪತ್ರೆಯ ರಕ್ತ ಕೇಂದ್ರ ಅಧಿಕಾರಿ ಡಾ. ಅರವಿಂದ್ ಪಿ., ಸಮಾಜ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರವೀಣ್ ಎಸ್. ದರ್ಬೆ, ಪ್ರಮುಖರಾದ ಲೋಕೇಶ್ ಬೋಳಾರ್,ದೀಪಕ್ ಮರೋಳಿ, ವಿಠಲ್ ಶೆಣೈ, ವಿಜಯ ಭಂಡಾರಿ, ನರಸಿಂಹ ತಾತಾವು, ರಾಮ ಸನಿಲ್, ಪ್ರಕಾಶ್ ತಾತಾವು, ಜಗದೀಶ ಶೆಣೈ,ಕಿರಣ್ ಮರೋಳಿ,ಅರುಣ್ ಶೆಟ್ಟಿ, ಮಾಲತಿ ಶೆಟ್ಟಿ,ಅನಿಲ್ ಕೆ. ಕೆಂಬಾರ್ ,ಚಂದ್ರಹಾಸ್ ಕುಲಾಲ್, ಪ್ರವೀಣ್ ನಿಡ್ಡೆಲ್, ಲತಾ ದೇವಾಡಿಗ, ಸುಶ್ಮಿತಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ದೀಪಕ್ ಮರೋಳಿ ಸ್ವಾಗತಿಸಿದರು. ದೀಪಕ್ ಅಡ್ಯಾರ್ ನಿರೂಪಿಸಿದರು. ಈ ಸಂದರ್ಭದಲ್ಲಿ ವಿಶ್ವ ರಕ್ತ ದಾನಿಗಳ ದಿನದ ಪ್ರಯುಕ್ತ ದಕ್ಷಿಣ ಕನ್ನಡದ ಎಲ್ಲಾ ರಕ್ತ ಕೇಂದ್ರಗಳ ಟೆಕ್ನಿಕಲ್ ಇನ್‌ಚಾರ್ಜ್‌ಗಳಾದ ಕೆಎಂಸಿ ರಕ್ತ ಕೇಂದ್ರದ ಭವಾನಿ ಶಂಕರ್, ಎ.ಜೆ ರಕ್ತ ಕೇಂದ್ರದ ಗೋಪಾಲಕೃಷ್ಣ, ವೆನ್‌ಲಾಕ್ ರಕ್ತ ಕೇಂದ್ರದ ಆಂಟೋನಿ, ಯೆನಪೋಯ ರಕ್ತ ಕೇಂದ್ರದ ಅರ್ಪಿತ, ರೆಡ್ ಕ್ರಾಸ್ ರಕ್ತ ಕೇಂದ್ರದ ನಾಗಭೂಷಣ, ಕೆ.ಎಸ್ ಹೆಗ್ಡೆ ರಕ್ತ ಕೇಂದ್ರದ ಅನಿಲ್, ಫಾದರ್ ಮುಲ್ಲರ್ ರಕ್ತ ಕೇಂದ್ರದ ಜೋಯಲ್ ಹಾಗೂ ಶ್ರೀನಿವಾಸ್ ಆಸ್ಪತ್ರೆ ರಕ್ತ ಕೇಂದ್ರದ ಸವಿತಾ ಅವರನ್ನು ಸಮ್ಮಾನಿಸಲಾಯಿತು.

