ಮಂಗಳೂರು : ಅಕ್ರಮ ಗೋಸಾಟ ಮಾಡುತ್ತಿದ್ದ ವಾಹನದ ಮೇಲೆ ಇಂದು ಮುಂಜಾನೆ ಪೋಲೀಸರು ಫೈರಿಂಗ್ ಮಾಡಿದ ಘಟನೆ ಈಶ್ವರಮಂಗಲದ ಬೆಳ್ಳಿಚಡವು ಎಂಬಲ್ಲಿ ನಡೆದಿದೆ. ಕರ್ನಾಟಕದಿಂದ ಕೇರಳಕ್ಕೆ ಸಾಗಿಸುತ್ತಿದ್ದ ಈಚರ್ ವಾಹನದಲ್ಲಿ ಅಕ್ರಮ ಗೋಸಾಟ ಮಾಡುತ್ತಿದ್ದ ವಾಹನ ನಿಲ್ಲಿಸಲು ಪೊಲೀಸರು ಸೂಚಿಸಿದ್ದಾರೆ, ಆದರೆ ಪೋಲೀಸರ ಮೇಲೆಯೇ ವಾಹನ ಚಲಾಯಿಸಲು ಆರೋಪಿಗಳು ಯತ್ನಿಸಿದ್ದಾರೆ.

ಈ ಸಮಯದಲ್ಲಿ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯ ಎಸ್.ಐ ಜಂಭೂರಾಜ್ ಮಹರಾಜ್ ಪೈರಿಂಗ್ ಮಾಡಿದ್ದಾರೆ. ಅಬ್ದುಲ್ಲಾ (40) ಪೋಲೀಸ್ ಫೈಯರಿಂಗ್ ನಲ್ಲಿ ಗಾಯಗೊಂಡ ಆರೋಪಿ, ಗಾಯಗೊಂಡ ಆರೋಪಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

ಓರ್ವ ಆರೋಪಿ ನಾಪತ್ತೆಯಾಗಿದ್ದು ಪೋಲೀಸರ ಶೋಧ ನಡೆಸುತ್ತಿದ್ದಾರೆ. ಪೋಲೀಸರು ಘಟನಾ ಸ್ಥಳದಲ್ಲಿ ಬಂದೋಬಸ್ತ್ ಮಾಡಿದ್ದಾರೆ. ಹಿಂದೂ ಸಂಘಟನೆಗಳ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

