ಮಂಗಳೂರು: ಕೆಂಪು ಕಲ್ಲು, ಮರಳಿನ ವಿಚಾರದಲ್ಲಿ ಶಾಸಕರು ಬೀದಿಯಲ್ಲಿ ಪ್ರತಿಭಟನೆ ಮಾಡೋದು ಸಮಸ್ಯೆ ಸರಿಪಡಿಸುವ ಕೆಲಸವನ್ನು ಮಾಡಬೇಕೆಂದು ಕಾಂಗ್ರೆಸ್ ಮುಖಂಡ ರಮಾನಾಥ ರೈ ಟೀಕಿಸಿದ್ದಕ್ಕೆ ಭರತ್ ಶೆಟ್ಟಿ ಉತ್ತರಿಸಿದರು. ಇದೊಂದು ಜೋಕ್ ರೀತಿ ಕಾಣತ್ತೆ. ಶಾಸಕರು ಟೇಬಲ್ ಕಾಯುತ್ತಾ ಕೆಲಸ ಮಾಡಿಸೋದು ಈ ಸರ್ಕಾರದಲ್ಲಿ ಸಾಧ್ಯನಾ.
ಹಿಂದಿನ ಸರ್ಕಾರ ಇದ್ದಾಗಲಾದ್ರೂ ಶಾಸಕರು ಈ ಕೆಲಸ ಮಾಡುತ್ತಿದ್ದರು. ಖಾದರ್, ಅಶೋಕ್ ರೈ, ಐವಾನ್, ಭಂಡಾರಿ ಅವರ ಪಕ್ಷದವರೇ ಇದ್ದಾರಲ್ವಾ.. ಯಾಕೆ ಮಾಡ್ತಾ ಇಲ್ಲ. ಖಾದರ್ ಜೊತೆಗೆ ತಿರುಗಾಡೋರು, ಕಾಂಗ್ರೆಸ್ ನಲ್ಲಿ ಇರೋರೇ ಮೊನ್ನೆ ನಮ್ಮ ಜೊತೆಗೆ ಪ್ರತಿಭಟನೆಗೆ ಬಂದಿದ್ದಾರೆ.
ನಮ್ಮ ಸರ್ಕಾರ ಇದ್ದಾಗ 272 ಮರಳು ಬ್ಲಾಕ್ ಗುತ್ತಿಗೆಯನ್ನು ಒಂದು ವಾರದಲ್ಲಿ ಕೊಟ್ಟಿದ್ದೆವು. ಈಗೇನು ಮಾಡುತ್ತಿದ್ದಾರೆ. ಲೀಸ್ ರಿನೀವಲ್ ಅನ್ನೋದು ಇವರಿಗೆ ಹೊಸ ಪದ ಅನ್ನೋ ರೀತಿಯಾಗಿದೆ ಎಂದು ತಿರುಗೇಟು ನೀಡಿದರು. ಸುದ್ದಿಗೋಷ್ಟಿಯಲ್ಲಿ ಪ್ರೇಮಾನಂದ ಶೆಟ್ಟಿ, ವಿಕಾಸ್ ಪುತ್ತೂರು ಮತ್ತಿತರರು ಇದ್ದರು.

